Friday, November 28, 2008

ಮೂರು ದಿನಗಳ ಕನ್ನಡ ನಾಡು ನುಡಿಯ ಸಮ್ಮೇಳನ :ವರದಿ:ಶಿಲ್ಪಾಸಂತೋಷ್ ನಮ್ಮ ಟಿ.ವಿ


:ವರದಿ:ಶಿಲ್ಪಾಸಂತೋಷ್ ನಮ್ಮ ಟಿ.ವಿ

ಮೂರು ದಿನಗಳ ಕನ್ನಡ ನಾಡು ನುಡಿಯ ರ್‍ಟ್ರಾಯ ಸಮ್ಮೇಳನ ಆಳ್ವಾಸ್ ನುಡಿಸಿರಿ-೨೦೦೮ ಮೂಡಬಿದರೆಯ ವಿದ್ಯಾಗಿರಿಯಲ್ಲಿರುವ ಶ್ರೀಮತಿ ಸುಂದರಿ ಆನಂದ -ಆಳ್ವ ಆವರಣದ ರತ್ನಾಕರ ವರ್ಣಿ ವೇದಿಕೆಯಲ್ಲಿ ಇಂದು ಸಮ್ಮೇಳನ ಆರಂಭಗೊಂಡಿತು

ವ್ಯಾಸರಾಯ ಬಲ್ಲಾಳ ಸಭಾಂಗಣದಲ್ಲಿ ತುಳುನಾಡಿನ ಗುತ್ತು ಮಾದರಿಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿರ್ಮಾಣಗೊಂಡ ರತ್ನಾಕರ ವರ್ಣಿ ವೇದಿಕೆಯಲ್ಲಿ ಸಾಹಿತಿ ಡಾಕೆ.ಎಸ್.ನಿಸಾರ್ ಅಹಮದ್ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ೨೦೦೬ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗಲೂ ವೇಷ ಬದಲಿಸಲು ನಾನು ಒಪ್ಪಿರಲಿಲ್ಲ. ಈಗ ಮೋಹನ ಆಳ್ವರ ಒತ್ತಾಯಕ್ಕೆ ಮಣಿದು ವೇಷಾಂತರಗೊಂಡಿದ್ದೇನೆ ಎಂದರು.
ನುಡಿಸಿರಿಯನ್ನು ಮುಕ್ತಮನದಿಂದ ಪ್ರಶಂಸಿಸಿದ ಅವರು ಭಾವನಾತ್ಮಕ ಮಜಲಿನಲ್ಲಿ ಹೃದಯವನ್ನು ಹತ್ತಿರವಾಗಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ. "ಘಟನೆಗೊಳ್ಳುತ್ತಿರುವ ಸಾಮಾಜಿಕ ಸ್ಥಿತಿಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ನಡೆಸುವ ಕೆಲಸ ಮಹೋಪಕಾರದ್ದು ಎಂದು ಬಣ್ಣಿಸಿದರು.
ಇಂತಹ ಸಮ್ಮೇಳನಗಳಿಗೆ ಕೆಲ ಇತಿ ಮಿತಿಗಳಿವೆ ಎಂದ ಅವರು ಇಲ್ಲಿ ಸುವರ್ಣ ಮಧ್ಯಮ ಮಾರ್ಗ ಅನುಸರಿಸುವುದು ಉಚಿತ. ಅಕಾಡೆ"ಕ್ ಆಸಕ್ತಿಂದ ಬರುವವರಿಗೂ, ಮನರಂಜನೆಯ ಆಸಕ್ತಿಯಿಂದ ಬರುವವರಿಗೂ ಸಮಾನ ನ್ಯಾಯ ಒದಗಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವ ಸಂದರ್ಭದಲ್ಲಿ ನಡೆಯುತ್ತಿರುವ ನುಡಿಸಿರಿಗೆ ವಿಶೇಷ ಮಹತ್ವ ಇದೆ. ಕನ್ನಡಿಗರು ಜಡತ್ವವನ್ನು ಕೊಡ"ಕೊಂಡು ಕನ್ನಡ ನುಡಿಯನ್ನು ಬಳಸಬೇಕು. ಕನ್ನಡ ಮಾತನಾಡುವಾಗ ಇಂಗ್ಲೀಷ್ ಪದಗಳನ್ನು ಬಳಸುವ ದುರಭ್ಯಾಸವನ್ನು ತೊಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಲ್ಲೂರು ಪ್ರಸಾದ್ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷ ನಡೆಸುವ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಿಸಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ. ಈ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸುವುದರಿಂದ ಅದು ಒಂದು ಜಾತ್ರೆಯಾದರೂ ಸಮ್ಮೇಳನದ ಸ್ವರೂಪ ಬದಲಾಸುವ ಉದ್ದೇಶ ಇಲ್ಲ ಎಂದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಒಂದೊಂದು ವಿಷಯಕ್ಕೆ ಸಂಬಂಧಿಸಿ ಸಮಾವೇಶ ನಡೆಸುತ್ತದೆ. ಮೊದಲ ಸಮಾವೇಶ ಧಾರವಾಡದಲ್ಲಿ ನಡೆಯಲಿದೆ ಯುವ ಸಾಹಿತ್ಯ ಸಮಾವೇಶ ಹೆಸರಿನಡಿ ನಡೆಯುವ ಈ ಸಮಾವೇಶದಲ್ಲಿ ಸಾಹಿತ್ಯದ ಮತ್ತು ಭಾಷೆಯ ಆಧುನಿಕ ಅವಸ್ಥಾಂತರದ ಬಗ್ಗೆ ಚರ್ಚೆಯಾಗಲಿದೆ. ಇದರಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ನುಡಿಸಿರಿಯ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂ.ಮೋಹನ್ ಆಳ್ವ, ಶ್ರೀ ಆನಂದ ಆಳ್ವ, ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಸಮ್ಮೇಳನಾಧ್ಯಕ್ಷ ನಾಡೋಜಾ ಡಾಚನ್ನವೀರ ಕಣವಿ ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ವೈಭವದ ಸಾಂಸ್ಕೃತಿಕ ನಡೆಯಿತು.

No comments: