Saturday, November 29, 2008

ರಾಜಕೀಯಕ್ಕೆ ಹೋಗುವ ತಪ್ಪನ್ನು ಮಾಡಲಾರೆ!

ರಾಜಕೀಯಕ್ಕೆ ಹೋಗುವ ತಪ್ಪನ್ನು ಮಾಡಲಾರೆ!ಎರಡೂ ಕೈಗಳಿಲ್ಲದ ಹುಡುಗಿಯೊಬ್ಬಳು ನಮ್ಮಲ್ಲಿ ಎಂಎಸ್‌ಡಬ್ಲ್ಯು ಮಾಡುತ್ತಿದ್ದಾಳೆಂದರೆ, ಕುಡುಬಿ ಜನಾಂಗದ ಚಿಮಿಣಿ ದೀಪದಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಓದಿದಾಕೆ ನಮ್ಮಲ್ಲಿ ಕಲಿತು ಸಿಇಟಿಯಲ್ಲಿ ರ್‍ಯಾಂಕ್ ಪಡೆದು ವೈದ್ಯಳಾಗುತ್ತಾಳೆಂದರೆ, ಮೂಡುಬಿದ್ರೆಯ ಡ್ರೈವರನ ಮಗ ನಮ್ಮಲ್ಲಿ ತರಬೇತಿ ಪಡೆದು ರಾಷ್ಟ್ರದ ೬೦೦ ಕಾಲೇಜುಗಳ ವಿದ್ಯಾರ್ಥಿಗಳಲ್ಲೇ ಅತ್ಯಂತ ವೇಗದ ಓಟಗಾರನಾಗುತ್ತಾನೆಂದರೆ ಆಗುವ ಸಂತೋಷವನ್ನು ಮಾತಿನಲ್ಲಿ ಹೇಳಲು ಸಾಧ್ಯವೇ?ಅಂದದ್ದು ಮೂಡುಬಿದ್ರೆಯ ನುಡಿಸಿರಿಯ ಮೋಹನ ಆಳ್ವ.ನುಡಿಸಿರಿಯ ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ೫.೩೦ಕ್ಕೆ ಜಾನಪದ ನೃತ್ಯ ಕುಣಿದು, ಬಳಿಕ ಸಂವಾದ ಕಾರ್‍ಯಕ್ರಮದಲ್ಲಿ ಪಾಲ್ಗೊಂಡ ಮೋಹನ ಆಳ್ವರಿಗೆ ಶಿಕ್ಷಣ ಸಂಸ್ಥೆ ನಡೆಸುವುದೊಂದಿಗೆ ಅದ್ಹೇಗೆ ಸಮಾಜ ಸೇವೆ ಮಾಡುತ್ತೀರಿ ಅಂತ ಪ್ರಶ್ನೆ ಕೇಳಿದವರಿಗೆ ಉತ್ತರಿಸಿದ್ದು ಹೀಗೆ. ಎಂಟು ಸಾವಿರ ವಿದ್ಯಾರ್ಥಿಗಳಿರುವ ಆಳ್ವರ ಶಿಕ್ಷಣ ಸಂಸ್ಥೆಯಲ್ಲಿ ಎಂಟು ನೂರು ಮಂದಿ ಸಂಗೀತ, ಕ್ರೀಡೆ ಹೀಗೆ ವಿವಿಧ ವಿಭಾಗಗಳ ಪ್ರತಿಭಾವಂತರಿಗೆ ಉಚಿತ ಊಟ, ವಸತಿ, ಶಿಕ್ಷಣ ಕೊಡುತ್ತಿರುವುದನ್ನ, ಆ ಮೂಲಕ ತಾನು ಅನುಭ"ಸುತ್ತಿರುವ ಆನಂದವನ್ನು ಅವರು "ವರಿಸಿದ್ದು "ಗೆ.ಸಮುದ್ರ ತಟದ ರಾಶಿಯಲ್ಲಿರುವ ಒಂದು ಮರಳು ನಾನು, ಆಕಾಶದ "ಂಚು ಹುಳ ನಾನು ಎಂದ ಆಳ್ವ ವೀರೇಂದ್ರ ಹೆಗಡೆ ತನ್ನ ಆದರ್ಶ ಎಂದರು. ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಹೆಮ್ಮೆ ಎಂದರು. ಅಕ್ಕಿಯಿಂದ ಆರುನೂರು ಬಗೆಯ ತಿಂಡಿಗಳನ್ನು ಮಾಡುತ್ತಾರೆ. ಅವೆಲ್ಲವೂ ಇಷ್ಟ ಎಂದರು. ಕೇಸರಿ, ಬಿಳಿ, ಹಸಿರು ಬಣ್ಣಗಳೆಂದರೆ ಇಷ್ಟ. ಎಲ್ಲ ಬಗೆಯ ಸಂಗೀತ, ನೃತ್ಯ, ವಾದ್ಯಗಳೂ ಇಷ್ಟ. ಅದರಲ್ಲೂ ಉಲ್ಲಾಸ ಕೊಡುವ ನೃತ್ಯ ಬಹು ಇಷ್ಟ ಅಂದರು.ತನ್ನ ಆಸ್ಪತ್ರೆ, ಶಿಕ್ಷಣ ಕ್ಷೇತ್ರವನ್ನು ವ್ಯಾಪಾರ ದ್ಟೃಂದ ನೋಡಿಲ್ಲ. ಆಸ್ಪತ್ರೆಯಲ್ಲಿಕಲೆಕ್ಷನ್ ಎಷ್ಟು ಆಗಿದೆ ಅಂತ ಇವತ್ತಿನವರೆಗೂ ನೋಡಿಲ್ಲ. ಹಣದ ಕಟ್ಟನ್ನು ಮನೆಗೆ ಒಲ್ಲ. ಬೇಕಾದ್ರೆ ಹೋಗಿ ಹುಡುಕಿ; ನನ್ನ ಖಾಸಗಿ ಅಕೌಂಟಿನಲ್ಲಿ ಒಂದು ಸಾವಿರ ರೂಪಾ ಇದ್ದರೆ ಅದು ನಿಮಗೇ! ಹಣದ ಬಗ್ಗೆ ಯೋಚಿಸಿದ್ರೆ ಸ್ವಚ್ಛ ಮನಸ್ಸು ಇಟ್ಟುಕೊಳ್ಳಲು ಆಗುವುದಿಲ್ಲ. ಅದನ್ನು ಹಣಕಾಸು ವಿಭಾಗದವರೇ ನೋಡಿಕೊಳ್ಳುತ್ತಾರೆ ಎಂದರು ಮೋಹನ ಆಳ್ವ ಸಂವಾದದಲ್ಲಿ ಬಂದ ಪ್ರಶ್ನೆಗಳಿಗುತ್ತರವಾಗಿ.ಬಂಟರ, ಬಟ್ಟರ, ಬಿಲ್ಲವರ ಸಮಾಜ ಎಂಬುದು ಸರಿಯಲ್ಲ. ಎಲ್ಲರೂ ಸೇರಿ ಸಮಾಜದ ಪರಿಕಲ್ಪನೆ. ತನಗೆ ಶ್ರೀಮಂತರ ಬಗ್ಗೆ ಗೌರವ ಮಾತ್ರ. ತನ್ನನ್ನು ಬೆಳೆಸುವವರು ಮಧ್ಯಮ ವರ್ಗದವರು. ಅವರ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದವರನ್ನು ಬೆಳೆಸಬೇಕು ಎಂದ ಆಳ್ವ, ತನ್ನ ತಂದೆ, ತಾ, ಪತ್ನಿ ಶೋಭಾರನ್ನು ನೆನಪಿಸಿಕೊಂಡರು. ಮೌಲ್ಯಾಧಾರಿತವಾದ, ಸಾಧ್ಯವಾಗುವ ಕನಸು ಕಟ್ಟಬೇಕು. ಅಸೂಯೆ, ದ್ವೇಸುವವರನ್ನು ಕಂಡರೆ ಇಷ್ಟವಲ್ಲ. ತಾಳ್ಮೆ, ತ್ಯಾಗಿಗಳು ಇಷ್ಟ ಎಂದರು.ತರಗತಿ ನಾಯಕನ ಸ್ಪರ್ಧೆಗೂ ನಿಲ್ಲದ ತಾನು ರಾಜಕೀಯಕ್ಕೆ ಹೋಗುವ ತಪ್ಪನ್ನು ನನ್ನ ಜನ್ಮದಲ್ಲಿ ಮಾಡುವುದಿಲ್ಲ. ಅದೇ ರೀತಿ ಸಾಹಿತ್ಯ ಪರಿಷತ್, ಅಕಾಡಮಿಗಳ ಅಧಿಕಾರ ಹೊಂದಿ, ಮಾರೀಚನಂತೆ ಇಷ್ಟವಿಲ್ಲದ ತಪ್ಪನ್ನು ಮಾಡಲಾರೆ. ದಿನದಲ್ಲಿ ನಾಲ್ಕೈದು ಗಂಟೆ ಮಾತ್ರ ಮಲಗುತ್ತೇನೆ ಎಂದ ಆಳ್ವ, ನುಡಿಸಿರಿಯಲ್ಲಿ ಸಿನಿಮಾ ಬಗ್ಗೆ ಗೋಷ್ಟಿ ಇಡಬಹುದಲ್ವ ಎಂಬ ನಾಗತಿಹಳ್ಳಿಯ ಪ್ರಶ್ನೆಗೆ ಸಿನಿಮಾ, ರಾಜಕೀಯ, ಧಾರ್ಮಿಕ ವ್ಯಕ್ತಿಗಳಿಗೆ ನುಡಿಸಿರಿ ವೇದಿಕೆಯಲ್ಲಿ ಅವಕಾಶ ಕೊಡುವುದಿಲ್ಲ. ಸಿನಿಮಾ ಅಂದ್ರೆ ಗ್ಲಾಮರ್‌ನವರೇ ನುಡಿಸಿರಿ ಸಂಘಟಿಸುವಾಗ ಹೆಚ್ಚು ಬಾಧೆ ಕೊಡುವವರು. ನಾಗತಿಹಳ್ಳಿಯವರೇ ಗ್ಟೋಯಲ್ಲಿ ಭಾಗವಹಿಸುವ ಸಿನಿಮಾದವರನ್ನು ಕರೆ ತಂದರೆ ಸಿನಿಮಾ ಗ್ಟೋ ಮುಂದಿನ ನುಡಿಸಿರಿಯಲ್ಲಿ ಆಯೋಜಿಸುತ್ತೇವೆ ಎಂದರು.ಪುಂಡಿಕಾಯಿ ಗಣಪಯ್ಯ ಭಟ್ ಸಂವಾದ ನಡೆಸಿಕೊಟ್ಟರು. ಭಾನುವಾರ ಬೆಳಿಗ್ಗೆ ಆರು ಗಂಟೆಗೆ ನಡೆದ ಈ ಕಾರ್‍ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು!ವರದಿ : ಮಿಥುನ ಕೊಡೆತ್ತೂರು

No comments: