ನುಡಿಸಿರಿಯ ಮೊದಲದಿನದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಖ್ಯಾತ ಕವಯತ್ರಿ ಮಮತಾ ಜಿ.ಸಾಗರ್ ತಮ್ಮ ಕಾವ್ಯ ಪ್ರೀತಿಯನ್ನು ತೋಡಿಕೊಂಡರು. ಉದ್ಘಾಟನಾ ಭಾಷಣದಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಕನ್ನಡ ಭಾಷೆ ಮಾತನಾಡುವಾಗ ಅನಗತ್ಯವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ದರಿದ್ರ ಬುದ್ಧಿಯನ್ನು ಬಿಡಿ ಎಂದು ಕನ್ನಡಿಗರಿಗೆ ಕರೆ ಕೊಟ್ಟರೆ, ಮಮತಾ ಜಿ. ಸಾಗರ್ ತಮ್ಮ ಭಾಷಣದಲ್ಲಿ ಇಂಗ್ಲೀಷ್ ಪದಗಳನ್ನು ಯಥೇಚ್ಛ ಬಳಸಿ ಕಂಗ್ಲೀಷ್ ಮಾತನಾಡಿದರು.
ನಾನು ನನ್ನ ತಾಯ ಹಾಗೆ ಎಂಬ ಕವನದಿಂದ ತಮ್ಮ ಮಾತು ಆರಂಭಿಸಿದ ಅವರು ತಾನು ಕವನ ಬರೆಯಲಾರಂಭಿಸಿದ್ದನ್ನು ಪ್ರಸ್ತಾವಿಸಿದರಾದರೂ, ಕವನ ಬರೆಯಲು ಆರಂಭಿಸಿದ್ದೇಕೆ, ಪ್ರೇರಣೆಗಳೇನು ಎಂಬ ಬಗ್ಗೆ ಮತ್ತೆ ಹೇಳುತ್ತೇನೆ ಎಂದವರು ಮತ್ತೆ ಹೇಳಲು ಮರೆತೇ ಬಿಟ್ಟರು. ನನ್ನ ಹಾಡಿನ ಜಾಡು, ಜಡಿಮಳೆ ಎಂಬ ಕವನ ವಾಚನದ ಮೂಲಕ ಅವರು ತಮ್ಮ ಮಾತು ಮುಗಿಸಿದರು. ಎಂ.ಎಸ್.ಗಿರಿಧರ್, ಜಿ.ವಸುಧಾ ಮತ್ತಿತರ ಕಲಾವಿದರ ತಂಡ ಮಮತಾ ಜಿ.ಸಾಗರ್ ಅವರ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರೇಕ್ಷಕರಿಗೆ ಸಂಗೀತವನ್ನು ಉಣಬಡಿಸಿತು.
No comments:
Post a Comment