Sunday, November 30, 2008

ಅಂಬಯ್ಯನುಲಿ ಅವರಿಂದ ಸುಗಮ ಸಂಗೀತ ೮.೩೦-೯.೩೦,ಉದಯರಾಗವನ್ನು ಅವರು ನಡೆಸಿ ಕೊಟ್ಟರು.

ಅಂಬಯ್ಯನುಲಿ ಅವರಿಂದ ಸುಗಮ ಸಂಗೀತ ೮.೩೦-೯.೩೦,ಉದಯರಾಗವನ್ನು ಅವರು ನಡೆಸಿ ಕೊಟ್ಟರು.



















Saturday, November 29, 2008

ಮುಂಜಾವಿನ ಚುಮುಚುಮು ಚಳಿಯಲ್ಲಿ ಮೋಹನ ಆಳ್ವರಿಂದ ಹಾಲಕ್ಕಿ ನರಸಣ್ಣ ನೃತ್ಯ



































































ರಾಜಕೀಯಕ್ಕೆ ಹೋಗುವ ತಪ್ಪನ್ನು ಮಾಡಲಾರೆ!

ರಾಜಕೀಯಕ್ಕೆ ಹೋಗುವ ತಪ್ಪನ್ನು ಮಾಡಲಾರೆ!ಎರಡೂ ಕೈಗಳಿಲ್ಲದ ಹುಡುಗಿಯೊಬ್ಬಳು ನಮ್ಮಲ್ಲಿ ಎಂಎಸ್‌ಡಬ್ಲ್ಯು ಮಾಡುತ್ತಿದ್ದಾಳೆಂದರೆ, ಕುಡುಬಿ ಜನಾಂಗದ ಚಿಮಿಣಿ ದೀಪದಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಓದಿದಾಕೆ ನಮ್ಮಲ್ಲಿ ಕಲಿತು ಸಿಇಟಿಯಲ್ಲಿ ರ್‍ಯಾಂಕ್ ಪಡೆದು ವೈದ್ಯಳಾಗುತ್ತಾಳೆಂದರೆ, ಮೂಡುಬಿದ್ರೆಯ ಡ್ರೈವರನ ಮಗ ನಮ್ಮಲ್ಲಿ ತರಬೇತಿ ಪಡೆದು ರಾಷ್ಟ್ರದ ೬೦೦ ಕಾಲೇಜುಗಳ ವಿದ್ಯಾರ್ಥಿಗಳಲ್ಲೇ ಅತ್ಯಂತ ವೇಗದ ಓಟಗಾರನಾಗುತ್ತಾನೆಂದರೆ ಆಗುವ ಸಂತೋಷವನ್ನು ಮಾತಿನಲ್ಲಿ ಹೇಳಲು ಸಾಧ್ಯವೇ?ಅಂದದ್ದು ಮೂಡುಬಿದ್ರೆಯ ನುಡಿಸಿರಿಯ ಮೋಹನ ಆಳ್ವ.ನುಡಿಸಿರಿಯ ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ೫.೩೦ಕ್ಕೆ ಜಾನಪದ ನೃತ್ಯ ಕುಣಿದು, ಬಳಿಕ ಸಂವಾದ ಕಾರ್‍ಯಕ್ರಮದಲ್ಲಿ ಪಾಲ್ಗೊಂಡ ಮೋಹನ ಆಳ್ವರಿಗೆ ಶಿಕ್ಷಣ ಸಂಸ್ಥೆ ನಡೆಸುವುದೊಂದಿಗೆ ಅದ್ಹೇಗೆ ಸಮಾಜ ಸೇವೆ ಮಾಡುತ್ತೀರಿ ಅಂತ ಪ್ರಶ್ನೆ ಕೇಳಿದವರಿಗೆ ಉತ್ತರಿಸಿದ್ದು ಹೀಗೆ. ಎಂಟು ಸಾವಿರ ವಿದ್ಯಾರ್ಥಿಗಳಿರುವ ಆಳ್ವರ ಶಿಕ್ಷಣ ಸಂಸ್ಥೆಯಲ್ಲಿ ಎಂಟು ನೂರು ಮಂದಿ ಸಂಗೀತ, ಕ್ರೀಡೆ ಹೀಗೆ ವಿವಿಧ ವಿಭಾಗಗಳ ಪ್ರತಿಭಾವಂತರಿಗೆ ಉಚಿತ ಊಟ, ವಸತಿ, ಶಿಕ್ಷಣ ಕೊಡುತ್ತಿರುವುದನ್ನ, ಆ ಮೂಲಕ ತಾನು ಅನುಭ"ಸುತ್ತಿರುವ ಆನಂದವನ್ನು ಅವರು "ವರಿಸಿದ್ದು "ಗೆ.ಸಮುದ್ರ ತಟದ ರಾಶಿಯಲ್ಲಿರುವ ಒಂದು ಮರಳು ನಾನು, ಆಕಾಶದ "ಂಚು ಹುಳ ನಾನು ಎಂದ ಆಳ್ವ ವೀರೇಂದ್ರ ಹೆಗಡೆ ತನ್ನ ಆದರ್ಶ ಎಂದರು. ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಹೆಮ್ಮೆ ಎಂದರು. ಅಕ್ಕಿಯಿಂದ ಆರುನೂರು ಬಗೆಯ ತಿಂಡಿಗಳನ್ನು ಮಾಡುತ್ತಾರೆ. ಅವೆಲ್ಲವೂ ಇಷ್ಟ ಎಂದರು. ಕೇಸರಿ, ಬಿಳಿ, ಹಸಿರು ಬಣ್ಣಗಳೆಂದರೆ ಇಷ್ಟ. ಎಲ್ಲ ಬಗೆಯ ಸಂಗೀತ, ನೃತ್ಯ, ವಾದ್ಯಗಳೂ ಇಷ್ಟ. ಅದರಲ್ಲೂ ಉಲ್ಲಾಸ ಕೊಡುವ ನೃತ್ಯ ಬಹು ಇಷ್ಟ ಅಂದರು.ತನ್ನ ಆಸ್ಪತ್ರೆ, ಶಿಕ್ಷಣ ಕ್ಷೇತ್ರವನ್ನು ವ್ಯಾಪಾರ ದ್ಟೃಂದ ನೋಡಿಲ್ಲ. ಆಸ್ಪತ್ರೆಯಲ್ಲಿಕಲೆಕ್ಷನ್ ಎಷ್ಟು ಆಗಿದೆ ಅಂತ ಇವತ್ತಿನವರೆಗೂ ನೋಡಿಲ್ಲ. ಹಣದ ಕಟ್ಟನ್ನು ಮನೆಗೆ ಒಲ್ಲ. ಬೇಕಾದ್ರೆ ಹೋಗಿ ಹುಡುಕಿ; ನನ್ನ ಖಾಸಗಿ ಅಕೌಂಟಿನಲ್ಲಿ ಒಂದು ಸಾವಿರ ರೂಪಾ ಇದ್ದರೆ ಅದು ನಿಮಗೇ! ಹಣದ ಬಗ್ಗೆ ಯೋಚಿಸಿದ್ರೆ ಸ್ವಚ್ಛ ಮನಸ್ಸು ಇಟ್ಟುಕೊಳ್ಳಲು ಆಗುವುದಿಲ್ಲ. ಅದನ್ನು ಹಣಕಾಸು ವಿಭಾಗದವರೇ ನೋಡಿಕೊಳ್ಳುತ್ತಾರೆ ಎಂದರು ಮೋಹನ ಆಳ್ವ ಸಂವಾದದಲ್ಲಿ ಬಂದ ಪ್ರಶ್ನೆಗಳಿಗುತ್ತರವಾಗಿ.ಬಂಟರ, ಬಟ್ಟರ, ಬಿಲ್ಲವರ ಸಮಾಜ ಎಂಬುದು ಸರಿಯಲ್ಲ. ಎಲ್ಲರೂ ಸೇರಿ ಸಮಾಜದ ಪರಿಕಲ್ಪನೆ. ತನಗೆ ಶ್ರೀಮಂತರ ಬಗ್ಗೆ ಗೌರವ ಮಾತ್ರ. ತನ್ನನ್ನು ಬೆಳೆಸುವವರು ಮಧ್ಯಮ ವರ್ಗದವರು. ಅವರ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದವರನ್ನು ಬೆಳೆಸಬೇಕು ಎಂದ ಆಳ್ವ, ತನ್ನ ತಂದೆ, ತಾ, ಪತ್ನಿ ಶೋಭಾರನ್ನು ನೆನಪಿಸಿಕೊಂಡರು. ಮೌಲ್ಯಾಧಾರಿತವಾದ, ಸಾಧ್ಯವಾಗುವ ಕನಸು ಕಟ್ಟಬೇಕು. ಅಸೂಯೆ, ದ್ವೇಸುವವರನ್ನು ಕಂಡರೆ ಇಷ್ಟವಲ್ಲ. ತಾಳ್ಮೆ, ತ್ಯಾಗಿಗಳು ಇಷ್ಟ ಎಂದರು.ತರಗತಿ ನಾಯಕನ ಸ್ಪರ್ಧೆಗೂ ನಿಲ್ಲದ ತಾನು ರಾಜಕೀಯಕ್ಕೆ ಹೋಗುವ ತಪ್ಪನ್ನು ನನ್ನ ಜನ್ಮದಲ್ಲಿ ಮಾಡುವುದಿಲ್ಲ. ಅದೇ ರೀತಿ ಸಾಹಿತ್ಯ ಪರಿಷತ್, ಅಕಾಡಮಿಗಳ ಅಧಿಕಾರ ಹೊಂದಿ, ಮಾರೀಚನಂತೆ ಇಷ್ಟವಿಲ್ಲದ ತಪ್ಪನ್ನು ಮಾಡಲಾರೆ. ದಿನದಲ್ಲಿ ನಾಲ್ಕೈದು ಗಂಟೆ ಮಾತ್ರ ಮಲಗುತ್ತೇನೆ ಎಂದ ಆಳ್ವ, ನುಡಿಸಿರಿಯಲ್ಲಿ ಸಿನಿಮಾ ಬಗ್ಗೆ ಗೋಷ್ಟಿ ಇಡಬಹುದಲ್ವ ಎಂಬ ನಾಗತಿಹಳ್ಳಿಯ ಪ್ರಶ್ನೆಗೆ ಸಿನಿಮಾ, ರಾಜಕೀಯ, ಧಾರ್ಮಿಕ ವ್ಯಕ್ತಿಗಳಿಗೆ ನುಡಿಸಿರಿ ವೇದಿಕೆಯಲ್ಲಿ ಅವಕಾಶ ಕೊಡುವುದಿಲ್ಲ. ಸಿನಿಮಾ ಅಂದ್ರೆ ಗ್ಲಾಮರ್‌ನವರೇ ನುಡಿಸಿರಿ ಸಂಘಟಿಸುವಾಗ ಹೆಚ್ಚು ಬಾಧೆ ಕೊಡುವವರು. ನಾಗತಿಹಳ್ಳಿಯವರೇ ಗ್ಟೋಯಲ್ಲಿ ಭಾಗವಹಿಸುವ ಸಿನಿಮಾದವರನ್ನು ಕರೆ ತಂದರೆ ಸಿನಿಮಾ ಗ್ಟೋ ಮುಂದಿನ ನುಡಿಸಿರಿಯಲ್ಲಿ ಆಯೋಜಿಸುತ್ತೇವೆ ಎಂದರು.ಪುಂಡಿಕಾಯಿ ಗಣಪಯ್ಯ ಭಟ್ ಸಂವಾದ ನಡೆಸಿಕೊಟ್ಟರು. ಭಾನುವಾರ ಬೆಳಿಗ್ಗೆ ಆರು ಗಂಟೆಗೆ ನಡೆದ ಈ ಕಾರ್‍ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು!ವರದಿ : ಮಿಥುನ ಕೊಡೆತ್ತೂರು

ಅರ್.ಕೆ.ನಾಯಕ್ ಜೊತೆ ಮೂಡಬಿದರೆ ಶ್ರೀಕಾಲೇಜ್ ವಿಧ್ಯಾರ್ಥಿಗಳು


ಅಧ್ಯಕ್ಷ ಕಣವಿ ಅವರು ಉಪಾಹಾರ ಶಾಂತದೇವಿ ಕಣವಿ ಅವರೊಂದಿಗೆ




ಅಧ್ಯಕ್ಷ ಕಣವಿ ಅವರು ಉಪಾಹಾರ ಶಾಂತದೇವಿ ಕಣವಿ ಅವರೊಂದಿಗೆ :ಚಿತ್ರ : ಸ್ವಾಮೀಜಿ


ದಿಗ್ಗಜರು ಅರ್.ಕೆ .ನಾಯಕ್ ಮತ್ತು ಪ್ರಕಾಶ್ ಶೆಟ್ಟಿ

ಖ್ಯಾತ ಕಲಾವಿದ ಪ್ರಕಾಶ್ ಶೆಟ್ಟಿ ಅವರು ಆಳ್ವಾಸ್ ನ ಪ್ರಧಾನ ಆಕರ್ಷಣೆಯಾಗಿರುವ ಚಿತ್ರ ನಟ ಆರ್ .ಕೆ.ನಾಯಕ್ ಅವರ ವ್ಯಂಗ್ಯ ಚಿತ್ರ ಬಿಡಿಸಿದರು. ಹೇಗಿತ್ತು ದಿಗ್ಗಜರ ಬೇಟಿ .

ನುಡಿಸಿರಿ :ದಿ ಹಿಂದೂ ಸುದ್ದಿ

MANGALORE: Steps should be taken to enrich Kannada language, which has recently been accorded the classical language status, said Channaveer Kanavi, poet, here on Friday.
He was speaking as the president of the three-day literary meet “Alva’s Nudisiri”, which began here.
Calling upon the language experts to contribute to make Kannada a rich language, he said many people had sacrificed their lives for it. The domination of Sanskrit was broken by the Vachanakaras of the 12th century. The rise of Buddhism and Jainism led to the emergence of the common man’s Kannada. The depth and scope of the “vachana movement” could be seen in the poets of different class and religion, the poet said. Stating that Sarvajna symbolised the strength and possibilities of Kannada mind, Mr. Kanavi said that another movement, the “tatva pada”, was led by Shishunala Shareef, Shankarananda and Mailara Basavalinga. This movement also showcased the depth of knowledge and reasoning of Kannada mind.
“Prior to Basava and the Vachana movement, Kannada was not much used for literary purpose” Mr. Kanavi said. The creative minds had been silenced by the then Sanskrit-dominant society. They found an outlet in the vachana movement to express themselves, Mr. Kanavi said.
This renaissance was enabled by the strength and courage of those poets. Kannada, as a culture, could not be understood by the geography of Karnataka or its population. The real strength and achievements of a language and a culture should be traced in the potential and prowess of a people over a period of time, Mr. Kanavi said.
www.thehindu.com

ಶಿಲ್ಪಾ ಶೆಟ್ಟಿಯ ಗಂಧದ ಎಣ್ಣೆಯ ಜಾಹಿರಾತೂ, ರೈತನ ಸಾವುಗಳೂ......


ಶಿಲ್ಪಾ ಶೆಟ್ಟಿಯ ಗಂಧದ ಎಣ್ಣೆಯ ಜಾಹಿರಾತೂ, ರೈತನ ಸಾವುಗಳೂ......

ವರದಿ : ಮಿಥುನ ಕೊಡೆತ್ತೂರು.

ವಿದ್ಯಾಗಿರಿ: ಶಿಲ್ಪಾ ಶೆಟ್ಟಿಯ ಚಿತ್ರವಿದ್ದ ಗಂಧದ ಎಣ್ಣೆ ಬಿಡುಗಡೆಯಾದರೆ ಪುಟಗಟ್ಟಲೆ ಸುದ್ದಿ ಮಾಡುವ ಪತ್ರಿಕೆಗಳು ಕರ್ನಾಟಕದಲ್ಲಿ ಅದೇ ಗಂಧದ ಮರವನ್ನು ರೈತ ಸ್ವತಃ ನೀರೆರೆದು ಬೆಳೆಸಿದರೂ ಕಡಿಯಲು ಕಾನೂನಿನಲ್ಲಿ ಅವಕಾಶವಿಲ್ಲ ಅಂತ ಸುದ್ಧಿ ಮಾಡುವುದಿಲ್ಲ ಎಂದು ನರೇಂದ್ರ ರೈ ದೇರ್ಲ ಹೇಳಿದರು.
ಅವರು ನುಡಿಸಿರಿಯ ಮೂರನೆಯ ವಿಚಾರಗೋಷ್ಟಿಯಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ಮಾತನಾಡಿದರು.
ವಿದೇಶದಿಂದ ಬರುವ ಕೇರಳಿಗ ತನ್ನ ಮನೆಯನ್ನು ಹೊಕ್ಕುವ ಮುಂಚೆ ಮಲೆಯಾಳಿ ಪತ್ರಿಕೆಯ ಚಂದಾ ಹಣ ಕಟ್ಟುತ್ತಾನೆ. ಅಲ್ಲಿನ ಒಂದು ಪತ್ರಿಕೆಯ ಪ್ರಸಾರ ಸಂಖ್ಯೆ, ಕನ್ನಡದ ಅಷ್ಟೂ ಪತ್ರಿಕೆಗಳ ಪ್ರಸಾರ ಸಂಖ್ಯೆಗಿಂತಲೂ ಹೆಚ್ಚು. ನಮ್ಮಲ್ಲಿ ಮಾಂಸದಂಗಡಿ, ತರಕಾರಿ ಅಂಗಡಿ ಜಾಸ್ತಿಯಾದಂತೆ ಪುಸ್ತಕ ಪತ್ರಿಕೆ ಮಾರುವ ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಹೇಲಿದ ದೇರ್ಲ ಮಂಗಲೂರು ವಿವಿಯ ಕೊಂಚ ದೂರದಲ್ಲಿ ಹಾಜಬ್ಬನೆಂಬ ಕಿತ್ತಲೆ ಮಾರುವುದನ್ನು ಗುರುತಿಸುವ ಕಾರ್‍ಯವನ್ನು ಪತ್ರಿಕೆಗಳು ಮಾಡಿದ್ದನ್ನು ನೆನಪಿಸಲು ಮರೆಯಲಿಲ್ಲ.
ಕನ್ನಡ, ಪತ್ರಿಕೆ ಇಲ್ಲದ ಕರ್ನಾಟಕವನ್ನು ಯೋಚಿಸಲಿಕ್ಕಾಗದು.
ಬೋರ್ಡಿಟ್ಟುಕೊಳ್ಳದೆ, ಕಟ್ಟಿಗೆ ಸುಟ್ಟು ಅಕ್ಷರ ಕಟ್ಟಿದ ಚಿಮಿಣಿ ದೀಪದಲ್ಲಿ ಬರೆದು ಮುದ್ರಿಸಿದ ಮೌಲ್ಯ ಕೇಂದ್ರಿತ ಪತ್ರಿಕೆಗಳು ಸ್ವಾತಂತ್ರ್ಯೋತ್ತರದಲ್ಲಿದ್ದವು. ಈಗ ಪ್ರಸಾರ, ಜಾಹೀರಾತುಗಳ ಮಧ್ಯೆ ಎಲ್ಲೋ ಒಂದು ಕಡೆ ನೈತಿಕತೆ ತಪ್ಪಿತೋ ಏನೋ ಅಂತನಿಸುತ್ತದೆ. ಕೆಟ್ಟ ಪತ್ರಿಕೆಗಳನ್ನು ಓದಿದರೆ ನಮ್ಮ ಮನಸ್ಸೂ ಕೆಟ್ಟ ಚಿಂತನೆಗಳನ್ನು ಹುಟ್ಟಿಸುತ್ತದೆ ಎಂದು ಹೇಳಿದರು.
ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಮಾತನಾಡಿದ ದೀಪಕ್ ತಿಮ್ಮಯ್ಯ, ಸುದ್ದಿ ವಾಹಿನಿಗಳು ಇಲಿ ಹೋದ್ರೆ ಹುಲಿ ಹೋಯಿತೆಂಬಂತೆ ವೈಭವೀಕರಿಸುವುದು ಸರಿಯಲ್ಲ. ಆದರೆ ಜನ ನೋಡುವುದರಿಂದ ಸುದ್ದಿಗಳನ್ನೂ ಹಾಗೇ ನೀಡಲಾಗುತ್ತಿದೆ. ಹಿಂದೆ ರೇಡಿಯೋದಿಂದ ಭಾಷೆ ಕಲಿಯಬಹುದಿತ್ತು. ಆದರೆ ಟಿವಿಯಿಂದ ಭಾಷೆ ಕಲಿಯುವುದು ಸಾಧ್ಯವೇ? ಆದರೂ ಟಿವಿಯಿಂದ ಪ್ರಭಾವಿತರಾಗಿ ಕನ್ನಡ ಕಲಿಯಲು ಜನ ಮುಂದೆ ಬರುತ್ತಿರುವುದನ್ನು ಕಾಣಬಹುದು. ಬೆಂಗಳೂರು ಕನ್ನಡದ ದಬ್ಬಾಳಿಕೆ ಬೇಕೆ ಪ್ರಾದೇಶಿಕ ಕನ್ನಡದ ಮೇಲಾಗುತ್ತಿರುವುದನ್ನು ಟಿವಿಯಲ್ಲಿ ಕಾಣುತ್ತಿದ್ದೇವೆ. ಭಾಷಾ ಜಾತಿ ಪದ್ಧತಿ ಕಾಣಬಹುದು. ಕನ್ನಡಿಗರೇ ಕನ್ನಡದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೇವೆ ಅಂತ ಅನಿಸುತ್ತಿದೆ.
ಕೆಟ್ಟ ಧಾರಾವಾಹಿಗಳು ಬರುತ್ತಲೇ ಇವೆ, ಜನ ನೋಡುತ್ತಿರುವುದರಿಂದ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನೂ ಹಾಳಾಗಬಹುದು ಎಂದು ಹೇಳಿದರು.
ಕನ್ನಡದ ಮಧ್ಯೆ ಇಂಗ್ಲಿಷ್ ಭಾಷೆಯನ್ನು ಬಳಸುವುದು ಸರಿಯಲ್ಲ. ಮೊದಲು ಕೀಳರಿಮೆಯಿಂದ ಹೊರಬರಬೇಕು ಎಂದು ದೀಪಕ್ ಹೇಳಿದರು.
ಸಂಪತ್ ಉಜಿರೆ ಗೋಷ್ಟಿ ನಿರೂಪಿಸಿದರು.

ಅನ್ಯ ಭಾಷೆ ಸಾಹಿತ್ಯದ ಪ್ರಭಾವಕ್ಕಿಂತ ಕನ್ನಡದ ಪ್ರಭಾವ ಮುಖ್ಯ-ಅರವಿಂದ ಮಾಲಗತ್ತಿ




ವರದಿ : ಮಿಥುನ ಕೊಡೆತ್ತೂರು.


ಅನ್ಯ ಭಾಷೆ ಸಾಹಿತ್ಯದ ಪ್ರಭಾವಕ್ಕಿಂತ ಕನ್ನಡದ ಪ್ರಭಾವ ಮುಖ್ಯ-ಅರವಿಂದ ಮಾಲಗತ್ತಿ


ವಿದ್ಯಾಗಿರಿ : ಅನ್ಯ ಭಾಷಾ ಸಾಹಿತ್ಯದಿಂದ ತಾನು ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ಬದಲು ಕನ್ನಡ ಸಾಹಿತ್ಯದಿಂದ ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೇಳುವ ಮೂಲಕ ನಮ್ಮ ತಲೆ ಕೆಳಗಾದ ಆಲೋಚನಾ ಕ್ರಮವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಡಾ. ಅರವಿಂದ ಮಾಲಗತ್ತಿ ಹೇಳಿದರು.ನುಡಿಸಿರಿಯ ಎರಡನೆಯ ದಿನವಾದ ಶುಕ್ರವಾರ ಸಮ್ಮೇಳನದ ಎರಡನೆಯ ವಿಚಾರ ಗೋಷ್ಟಿ ಕನ್ನಡ ಸಾಹಿತ್ಯ : ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಆಧುನಿಕ ಸಾಹಿತ್ಯ ಹೊಸ ಸಂವೇದನೆಗಳ ಕುರಿತು ಮಾತನಾಡಿದ ಮಾಲಗತ್ತಿ, ಕನ್ನಡಕ್ಕೆ ೭ eನಪೀಠ, ೫೫ಕೇಂದ್ರ ಅಕಾಡಿಯ ಪ್ರಶಸ್ತಿಗಳು ಬಂದಿವೆ. ಹೀಗೆ ಪ್ರಶಸ್ತಿಗಳು ಬಂದಾಗ ವಾದಗಳೂ ಆಗಿವೆ. ಹಾಗಾಗಿ ಪ್ರಶಸ್ತಿಗಳೇ ಸಾಹಿತ್ಯ, ಕೃತಿಗಳ ಮಾನದಂಡವಲ್ಲ.ಪ್ರಪಂಚದ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಸ್ಥಾನವಿದೆ. ಕನ್ನಡದಲ್ಲಿ ವೈಚಾರಿಕ ಸಾಹಿತ್ಯ ಪ್ರಬುದ್ಧವಾಗಿ ಬಂದಿದೆ. ಹೊಸಗನ್ನಡ ಸಾಹಿತ್ಯ ಧರ್ಮದಿಂದ ಅತೀತವಾಗಿ ಬೆಳೆಯಿತು. ನವೋದಯದ ಆರಂಭದಲ್ಲಿ ಬಂದ ಹನ್ನೆರಡು ಜಾನಪದ ಮಹಾಕಾವ್ಯಗಳನ್ನು ಸಂಗ್ರಹಿಸುವ ದೊಡ್ಡ ಕಾರ್‍ಯವಾಯಿತು. ಬಹಿರಂಗ ಆಲೋಚನೆ ಕ್ರಮದಿಂದ ಮನುಷ್ಯನ ಅಂತರಂಗದ ಶೋಧವನ್ನು ನವೋದಯ ಸಾಹಿತ್ಯ ಸಾರಿತು ಎಂದರು. ಪ್ರಾದೇಶಿಕ ಭಾಷೆಯನ್ನು ಒಳಹೊಕ್ಕು ನೋಡುವ ಮೂರನೆಯ ಕಣ್ಣು ಬೇಕು. ಕೊಡವ, ತುಳು, ಬ್ಯಾರಿ ಭಾಷಾ ಸಾಹಿತಿಗಳು ಕನ್ನಡದಲ್ಲೂ ಹೆಚ್ಚು ಸಾಹಿತ್ಯ ರಚಿಸಿದಾಗ ಸಾಂಸ್ಕೃತಿಕ ಬೆಸುಗೆ, ಸೌಹಾರ್ದಯುತ ವಾತಾವರಣ ಸಾಧ್ಯ ಎಂದು ಹೇಳಿದರು.ಪ್ರಾಚೀನ ಕನ್ನಡ ಸಾಹಿತ್ಯ : ಪರಂಪರೆ ಪ್ರಕಾರಗಳು ಮತ್ತು ಮುಖಾಮುಖಿಯ ಬಗ್ಗೆ ಮಾತನಾಡಿದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಮಾತು, ಭಾಷೆ ಹುಟ್ಟಿದಂದಿನಿಂದಲೇ ಸಾಹಿತ್ಯ ಹುಟ್ಟಿತು. ಜಾನಪದ ಸಾ"ತ್ಯ ಗ್ರಂಥಸ್ಥವಾತು. ಈ ಮಧ್ಯೆ ಪಂಪನ ಸಾಹಿತ್ಯ ಕಾಲದ ನಂತರ ರಾಜಾಶ್ರಯ ತಿರಸ್ಕರಿಸಿದ ವಚನ ಸಾಹಿತ್ಯ, ರಗಳೆ, ಷಟ್ಪದಿಗಳು, ಬಳಿಕ ಕೀರ್ತನೆಗಳು ಹೀಗೆ ಸಾಹಿತ್ಯ ಬೆಳೆದು ಬಂತು. ವೈದಿಕ, ಜೈನ, ಇಸ್ಲಾಂ, ಕ್ರೈಸ್ತ ಹೀಗೆ ಮತಗಳ ಸಾಹಿತ್ಯವೂ ಕನ್ನಡದಲ್ಲಿ ಹರಿದು ಬಂತು ಎಂದು ಹೇಳಿದರು. ಧನಂಜಯ ಕುಂಬ್ಳೆ ಗ್ಟೋ ನಿರೂಪಿಸಿದರು.

Friday, November 28, 2008

Language should unite people: Nisar Ahmed

Traditional honour: Poet Channaveera Kanavi being brought to the venue of Alva’s Nudisiri at www.thehindu.com

Moodbidri near Mangalore on Friday.
MANGALORE: Poet K.S. Nisar Ahmed said on Friday that people using Kannada had the greater responsibility of promoting unity and integrity of the nation through the language in the wake of increasing violence in society.
He was speaking after inaugurating Alva’s Nudisiri, a three-day annual literary festival, at Moodbidri near here.
Referring to Kannada epic Kavirajamarga, he said that it showed what a language should achieve now. On the usage of Kannada in present days, he expressed concern over Sanskritisation and urbanisation of Kannada.
Poet Channavera Kanavi, president of the literary event; Nallur Prasad, president of the Kannada Sahitya Parishat; K. Amarnath Shetty, former Minister, and K. Abhayachandra Jain, MLA, were present.Procession
A colourful procession comprising performance by cultural troupes was taken out in the town.
Mr. Kanavi was brought in the procession to the venue. Welcoming the gathering, Mohan Alva, president of Alva’s Education Foundation, expressed his desire to organise Nudisiri in each district of the State. Mr. Prasad pondered over why sahitya sammelans end up as an annual festival without contributing much to the development of the language by discussing the contemporary world and problems.
To discuss the contemporary world and problems, literary meets would be held at zonal levels. Dharwad would be the first to host such a meet, he said.
Mr. Kanavi released “Kannada Manasu - Sahitya Jawabdaari’, a souvenir of Nudisiri 2008, on the occasion.

೨೯-೧೧-೨೦೦೮ ಚೆನ್ನವೀರ ಕಣವಿ ಸಂವಾದ -ವೆಂಕಟೇಶ್ ಕುಮಾರ್ ಧಾರವಾಡ ಉದಯರಾಗ ವೈಭವ







The Hindu Report on Nudisiri

Nudisiri draws college students
Staff Correspondent
Leading publishing houses offer discount on books
Many stalls intended to ‘fight globalisation’
MANGALORE: Book lovers are thronging the book stalls in the three-day festival of literature that got off to a start at Moodbidri near here on Friday.
These stalls were giving good discounts on account of the festival.
Interestingly, there were more college students among the crowds in the book exhibition and many bookstalls were selling the kurtas.
Popular publishing houses such as Navakarnataka and Ankita are displaying more of their own publications but still have given space for books from other publishing houses.
Navakarnataka is giving a discount of 10 per cent, Ankita 10 to 15 per cent and Lankesh Publishing House 20 per cent.
Bharatiya Vidya Bhavan has published a new series of translated works from Sanskrit.
These introductory books to Sanskrit literature and philosophy are available for Rs. 30.
Books published by different universities of Karnataka – namely Mysore, Mangalore and Hampi are on sale with discount being 50 per cent.
Sanatana Samstha, Ramakrishna Mission and Shanthi Prakashana are selling books that are religious and spiritual in nature.
And All India Democratic Youth Organisation from Bangalore is exhibiting and selling political books ranging from Rs. 20 to Rs. 200.
Other than books, cotton handlooms are kept in different stalls for exhibition and sale.
Desi Samskruti from Shimoga has cotton saris for Rs. 480 to Rs. 640, Kurtas for Rs. 180 to Rs. 250 and shirts for Rs. 160 to Rs. 180. This organisation, in its banner, says, it’s a fight against globalisation.
Arive from Heggodu is selling Kurtas ranging from Rs. 190 to Rs. 230 and cotton bags ranging from Rs. 75 to Rs. 80.
Namma Bhoomi from Kanyana, Kundapura has also put up a stall of khadi and cotton dresses and other local artefacts made by the children of Namma Bhoomi.
Other than the cotton and khadi, one can also find a stall by Samaja Sevakara Samithi of Bangalore, which is selling T-shirts with Kannada poems imprinted on them. Benefit for schools
The money generated from sale of T-shirts with messages in Kannada will go to schools in Kolar, according to stall keeper H. Rajkumar.
The messages are taken from the works of Kuvempu, D.V. Gundappa and Rajaratnam.
Amidst all this, one can find stamp and coin exhibition by Rayi Rajkumar of Moodbidri and exhibition of Kannada greeting cards produced by Chitte Greetings of Bangalore. www.thehindu.com

ಸೋನಿಯಾ, ಸುಷ್ಮಾ ಕನ್ನಡ ಮಾತಾಡಿದ್ರೆ ಚಪ್ಪಾಳೆ, ಮಗು ಮಾತಾಡಿದ್ರೆ ಪೆಟ್ಟು!

ವರದಿ ಮಿಥುನ ಕೊಡೆತ್ತೂರು
ಸೋನಿಯಾ, ಸುಷ್ಮಾ ಕನ್ನಡ ಮಾತಾಡಿದ್ರೆ ಚಪ್ಪಾಳೆ, ಮಗು ಮಾತಾಡಿದ್ರೆ ಪೆಟ್ಟು!
ಮೂಡುಬಿದ್ರೆ : ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ಕನ್ನಡದಲ್ಲಿ ನಮಸ್ಕಾರ ಅಚಿದ್ರೆ ಚಪ್ಪಾಳೆ ಹೊಡೆಯುತ್ತೇವೆ. ನಮ್ಮ ಮನೆ ಮಗು ಕನ್ನಡ ಮಾತಾಡ್ರೆ ಹೊಡೆದು ಇಂಗ್ಲಿಷ್‌ನಲ್ಲಿ ಮಾತಾಡಿಸ್ತೇವೆ.ಸಿನಿಮಾ ನೋಡಿ ಬಂದು ಮನೆಯಲ್ಲಿ ಕಥೆ ಹೇಳುತ್ತೇವೆ. ಸಿನಿಮಾಕ್ಕೆ ಕಷ್ಟ ಪಟ್ಟು ಪಡೆದ ಟಿಕೆಟಿ ಕಥೆಯನ್ನೂ ಹೇಳುತ್ತೇವೆ.ಸಾಗರದಿಂದ ಶಿವಮೊಗ್ಗಕ್ಕೆ ಡೈಲಿ ಬಸ್ಸು ಬರುತ್ತದೆ ಅಚಿದ್ರೆ ಅದು ಕಥೆ ಅಲ್ಲ. ಬಸ್ಸು ಬರಲಿಲ್ಲ ಅಚಿದ್ರೆ ಕಥೆ ಆರಂಭವಾಗುತ್ತದೆ!ನಮ್ಮೂರಲ್ಲೊಬ್ಬ ಮರುಳ ಇದ್ದ. ದಿನಾ ಬೆಳಿಗ್ಗೆ ಬಾರೋ ಬಾರೋ ಅಚಿತ ಕೂಗುತ್ತಿದ್ದ. ಸೂರ್‍ಯ ಹುಟ್ಟುತ್ತಿದ್ದ. ಸಂಜೆ ಹೋಗೋ ಹೋಗೋ ಅನ್ನುತ್ತಿದ್ದ. ಸೂರ್‍ಯ ಮುಳುಗುತ್ತಿದ್ದ!ನಮ್ಮೂರಿಗೊಮ್ಮೆ ಏಣಗಿ ಬಾಳಪ್ಪನವರ ನಾಟಕ ಕಂಪೆನಿ ಬಂದಿತ್ತು. ಅದರಲ್ಲಿ ಹಾಡುತ್ತಿದ್ದ ಒಬ್ಬರಿಗೆ ಕಣ್ಣು ಕಾಣುತ್ತಿರಲಿಲ್ಲ. ನಾಟಕ ಕಲಾವಿದರೊಂದಿಗೆ ಅವರೂ ಸಮುದ್ರ ತೀರಕ್ಕೆ ಸೂರ್‍ಯಾಸ್ತ ನೋಡಲು ಬರುತ್ತಿದ್ದರು. ನಾವೂ ಅವರ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದೆವು. ಸೂರ್‍ಯಾಸ್ತಮಾನವಾಗುತ್ತಿದ್ದಂತೆ ಆಯ್ತೇನಪ್ಪ? ಅಂತ ಕೇಳುತ್ತಿದ್ದರು. ಹೌದು ಅಂದಾಗ ಎದ್ದು ಹೊರಡುತ್ತಿದ್ದರು. ಅವರಿಗೆ ಅದೇನು ಸೂರ್‍ಯಾಸ್ತಮಾನ ಕಾಣುತ್ತಿತ್ತೋ? ನಮ್ಮ ಮನೆ ಪಕ್ಕದ ಹೆಂಗಸೊಬ್ಬರಿಗೆ ಮಕ್ಕಳಿರಲಿಲ್ಲ. ಆದರೆ ಆ ಮನೆಯಲ್ಲಿ ಅವರ ಅಕ್ಕನ ಮಕ್ಕಳಿದ್ದರು. ಹೆಂಗಸಿಗೆ ಮೈತುಂಬ ರೋಗವಾಗಿ ಆ ಮನೆಗೆ ಯಾರೂ ಬರುತ್ತಿರಲಿಲ್ಲ. ಆಕೆಯ ಅಕ್ಕನ ಮಕ್ಕಳಿಗೆ ಮದುವೆಯಾಗಲು ಗಂಡುಗಳು ಬರುತ್ತಿರಲಿಲ್ಲ. ಆಗ ನಮ್ಮ ಮನೆಗೆ ಬಂದ ಆಕೆಯ ಅಕ್ಕ, ತಂಗಿ ನಂಗೆ ಮಾತ್ರೆ ತಂದು ಕೊಡಿ, ನಾನು ಸಾಯುತ್ತೇನೆ ಅಂದದ್ದಕ್ಕೆ ಮಾತ್ರೆ ತಂದುಕೊಟ್ಟೆವು. ಆದರೆ ಆಕೆ ನಾಳೆ ತಿನ್ನುತ್ತೇನೆ ಅಂತಿದ್ದಾಳೆ ಅಂತ "ಷಾದದಿಂದ ಹೇಳುತ್ತಿದ್ದರು. ಒಂದೆಡೆ ಬದುಕುವ ಆಸೆ, ಇನ್ರ್ನೆಂದೆಡೆ ಸಾಯದಿರುವ "ಷಾದ. ಮುಂಬುಯಲ್ಲಿ ಪ್ರಾಣ ಒತ್ತೆ ಇಟ್ಟು ಸೈನಿಕರು ಉಗ್ರರೊಂದಿಗೆ ಕಾದಾಡುತ್ತಿದ್ದಾರೆ. ನಾ"ಲ್ಲಿ ನೆಮ್ಮದಿಯಾಗಿ ನುಡಿಸಿರಿಯಲ್ಲಿದ್ದೇವೆ. ನಾ"ಲ್ಲಿ ಖುಯಲ್ಲಿರುವುದಕ್ಕೆ ಸೈನಿಕರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ ಎಂಬುದು ತಿಳಿದಿರಬೇಕು.ಮುಂಬೈಯಲ್ಲಿ ಜೋರು ಮಳೆ, ನೆರೆಯಾಗಿ ಹೊರಗೆಲ್ಲ ನೀರು, ಆದರೆ ನಮಗೆ ಕುಡಿಯಲು ನೀರು ಸಿಗುವುದು ಕಷ್ಟವಾತು.ಮುಂಬೈ ರೈಲ್ವೆ ನಿಲ್ದಾಣದಲ್ಲಿ ಯುವತಿ ಹುಚ್ಚಿಯೊಬ್ಬಳು ಎದ್ದು ನಿಂತಾಗ ಸಾಲಾಗಿ ನಿಂತಿದ್ದ ಯುವತಿಯರು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.ಹೀಗೆ ಪುಟ್ಟ ಪುಟ್ಟ ಘಟನೆಗಳನ್ನು ಹೇಳಿ ತನ್ನ ಕಥೆಗಳ ಪ್ರೇರಣೆಯನ್ನು ನುಡಿಸಿರಿಯ ಈ ಬಾರಿಯ ವಿಶೇಷ ಕಥಾ ಸಮಯದಲ್ಲಿ ವಿವರಿಸಿದವರು ಮುಂಗಾರು ಮಳೆಯ ಅನಂತರ ಐವತ್ತಕ್ಕೂ ಹೆಚ್ಚು ಸಿನಿಮಾ ಗೀತೆಗಳಿಂದ ಖ್ಯಾತರಾದ ಕಥೆಗಾರ ಜಯಂತ ಕಾಯ್ಕಿಣಿ.ಕಥೆ ಕೇವಲ ದಾಖಲೆಗಳಲ್ಲ. ಉಳಿದ ಜೀವನಗಳಲ್ಲಿ ಮಾನವೀಯ ವಿನ್ಯಾಸಗಳನ್ನು ಕಾಣಬೇಕು. ನಾನು, ನನ್ನ ಹೆಂಡ್ತಿ, ನನ್ನ ಹೆಲ್ಮೆಟ್, ನಾನು ಕಾಫಿ ಕುಡಿಯುವ ಶಾಂತಿ ಭವನ ಇ೦ತಹ ಸ್ವಾರ್ಥಿಯಾಗಬಾರದು ಎಂದು ಕಾಯ್ಕಿಣಿ ಹೇಳಿದರು. ಏನು ಬರೆದ್ರೂ ಪ್ರಿಂಟಾಗುವ ವಿಫುಲತೆಯ ಡೇಂಜರ್ ಸ್ಥಿತಿ ಈಗ ಇದೆ. ಅತ್ಯಂತ ಕಷ್ಟಕರವಾದ ಕಥೆ, ಕವಿತೆ ಬರೆದಾಗ ಆತನ ಸೀಮೆಗಳು ಹಿಗ್ಗುತ್ತವೆ ಎಂದು ಅವರು ಹೇಳಿದರು. ದಿವ್ಯಶ್ರೀನಿರೂಪಿಸಿದರು.

ನೃತ್ಯ ವೈಭವ ವೀಡಿಯೊ

ವಿಡಿಯೋ: shreenidhi

ಮಿಡಿಯಾ ಕೇಂದ್ರಕ್ಕೆ ನಿಸಾರ್ ಬೇಟಿ



ಕವಿ ನಿಸಾರ್ ಅಹ್ಮದ್ ಅವರು ಮಾಧ್ಯಮ ಕೇಂದ್ರಕ್ಕೆ ಬೇಟಿ ನೀಡಿದರು.
ಮಾಧ್ಯಮದೊಂದಿಗೆ ಅವರ ಅಭಿಪ್ರಾಯಗಳನ್ನು ಹಂಚಿಕೊಂಡರು.



ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯುವುದು ಸಾಧ್ಯ-ಪುರುಷೋತ್ತಮ

ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯುವುದು ಸಾಧ್ಯ-ಪುರುಷೋತ್ತಮ ಬಿಳಿಮಲೆಕನ್ನಡ ಭಾಷೆ: ಶಕ್ತಿ ಮತ್ತು ವ್ಯಾಪ್ತಿ ಗ್ಟೋಮೂಡುಬಿದ್ರೆ :ಸುಮಾರು ಮೂರು ಸಾವಿರ ವರುಷಗಳ ಹಿಂದೆ ಕನ್ನಡ ಭಾಷೆಗೆ ೫೨ಅಕ್ಷರಗಳ ಲಿಪಿ(ತಮಿಳಿಗೆ ೩೨)ಯನ್ನು ಒಪ್ಪಿಕೊಂಡುದೇ ಕನ್ನಡದ ಶಕ್ತಿಯನ್ನು ಅರ್ಥೈಸಲು ಸಾಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ನುಡಿಸಿರಿಯ ಮೊದಲ ವಿಚಾರ ಗೋಷ್ಟಿ ಕನ್ನಡ ಭಾಷೆ: ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವದ ಕುರಿತು ಮಾತನಾಡಿದರು.೫೨ಲಿಪಿಗಳ ಕಾರಣದಿಂದ ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯಲು ಸಾಧ್ಯವಾಗಿದೆ.ಕನ್ನಡಕ್ಕೆ ಜೈನ, ಬೌದ್ಧ, ಇಸ್ಲಾಂ ಸಾಹಿತಿಗಳ ಕೊಡುಗೆ ಬಹಳಷ್ಟಿದೆ. ಅಥವಾ ಕನ್ನಡದ ಜನ ಇತರ ಭಾಷೆ ಅಚಿದರೆ ಸಂಸ್ಕೃತಿಯನ್ನೂ ಸ್ವೀಕರಿಸಿದರು. ಸಂಸ್ಕೃತದ ಪ್ರಭಾವ ಕನ್ನಡಕ್ಕೆ ಸಾಕಷ್ಟಿದೆ. ಆದರೆ ಸಂಸ್ಕೃತದ ಪದಗಳನ್ನು ಪುನಾರಚಿಸಿಕೊಂಡು ಕನ್ನಡಕ್ಕೆ ತರಲಾಗಿದೆ. ಮಲೆಯಾಳಿ, ತಮಿಳು, ತೆಲುಗು, ಹಿಂದಿ ಭಾಷೆಗಳನ್ನು ನೋಡಿದಾಗ ಕನ್ನಡದ ಶಕ್ತಿ ಅರಿವಾಗುತ್ತದೆ. ಮೂರು ಸಾವಿರ ವರುಷಗಳಿಂದ ಇದ್ದು, ಇವತ್ತೂ ಇರುವ ಹನ್ನೆರಡು ಭಾಷೆಗಳಲ್ಲಿ ಕನ್ನಡವೂ ಎಂದು ಹೇಳಿದ ಬಿಲೆಮಲೆ ಕನ್ನಡ ಭಾಷೆಯ ಕುರಿತಾದ ಆತಂಕ ಅನಗತ್ಯ ಎಂದರು.ತಮಿಳಿಗೆ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆ ಕೇಳಿ ಬಂದದ್ದು ಶಿಕಾಗೋದಿಂದ. ಹೊರದೇಶಗಳಲ್ಲಿ ತಮಿಳಿನ ಮುನ್ನೂರು, ತೆಲುಗಿನ ಅರ್‍ವತ್ತು "ದ್ವಾಂಸರಿದ್ದಾರೆ. ಆದರೆ ಕನ್ನಡ ಬಲ್ಲ ದೊಡ್ಡ "ದ್ವಾಂಸರು "ದೇಶಗಳಲ್ಲಿ ಕನ್ನಡಕ್ಕಾಗಿ ಧ್ವನಿ ಎತ್ತುವುದಿಲ್ಲ. ಕನ್ನಡದ ಕೃತಿಗಳು "ದೇಶಗಳಲ್ಲಿ ಅಲ್ಲಿನ ಭಾಷೆಗಳಿಗೆ ಅನುವಾದಗೊಂಡಾಗ ಕನ್ನಡಕ್ಕೆ ಮತ್ತಷ್ಟು ಪ್ರಧಾನತೆ ಬರುತ್ತದೆ. ಲೋಕಸಭೆಯಲ್ಲಿ ಮೈಥಿಲಿ, ದೋಗ್ರಿ ಭಾಷೆ ಮಾತನಾಡಲು ಸಂಸದರು ಇದ್ದರು. ತುಳು"ನ ಬಗ್ಗೆ ಮಾತನಾಡಲು ಕರ್ನಾಟಕದ ಸಂಸದರು ಏಳಲಿಲ್ಲ ಎಂದು ಹೇಳಿದರು.ಉಪಭಾಷೆಯ ನಿರ್ನಾಮಧಾರವಾಡ, ಮೂಡುಬಿದ್ರೆ, ಕೋಲಾರದವರು "ಗೆ ಕನ್ನಡದ ""ಧೆಡೆಯ ಮಂದಿ ತನ್ನ ಕನ್ನಡ ಸರಿಲ್ಲ ಎಂದು ತಪ್ಪು ತಿಳಿದುಕೊಳ್ಳುವ ಅಗತ್ಯ"ಲ್ಲ ಎಂದು ಕನ್ನಡ ಭಾಷೆಯ ಪ್ರಾದೇಶಿಕ ವೈ"ಧ್ಯದ ಕುರಿತು ಮಾತನಾಡಿದ ಡಾ. ಚಂದ್ರಶೇಖರ ನಂಗಲಿ ಹೇಳಿದರು.ಪ್ರಮಾಣ ಭಾಷೆಯ ಹೆಸರಲ್ಲಿ ಉಪಭಾಷೆಯನ್ನು ನಿರ್ನಾಮ ಮಾಡುವ ಶಿಕ್ಷಣ ಕ್ರಮ ನಮ್ಮಲ್ಲಿದೆ. ಭಾಕ ಜಾತಿ ಪದ್ದತಿಯಂತೆ ಮೇಲುಕೀಳೆಂಬ ಭಾವನೆ ಬೇಡ. ಬೇರೆ ಭಾಷೆಗಳ ಪದಗಳು ಪರಿಷ್ಕಾರಗೊಂಡು ಕನ್ನಡಕ್ಕೆ ಬರಬೇಕು. ಹಳೆಗನ್ನಡ, ಹೊಸಗನ್ನಡ, ನಡುಗನ್ನಡ ಎಂಬುದು ಕೇವಲ ಗ್ರಾಂಥಿಕ ಕಲ್ಪನೆ. ಕನ್ನಡ ಯಾವತ್ತೂ ಹೊಸದೇ ಎಂದು ನಂಗಲಿ ಹೇಳಿದರು.ಭಾಕ ಅರಣ್ಯವನ್ನು ನಾಶ ಮಾಡಿ ಶಿಕ್ಷಣದ ಹೆಸರಲ್ಲಿ ಮಕ್ಕಳನ್ನು ತೋಪನ್ನಾಗಿಸುತ್ತಿದ್ದೇವೆ. "ಗೇ ಮುಂದುವರಿದರೆ ಉಚ್ಚ ನೀಚ ಕನ್ನಡ ಅಂತಾಗಬಹುದು. ಪ್ರಮಾಣ ಭಾಷೆಯಲ್ಲಿ ಕೇವಲ "ನು ಅಚಿದರೆ ಪ್ರಾದೇಶಿಕವಾಗಿ "ನಿನ ಅನೇಕ ಜಾತಿಗಳನ್ನು ಹೆಸರು "ಡಿದು ಕರೆಯುತ್ತಾರೆ. ಭಾಷೆ ಬೆಳೆಯುವುದು "ಗೆ ಎಂದು "ವರಿಸಿದರು.ಮುನಿರಾಜ ರೆಂಜಾಳ ಗ್ಟೋ ನಿರೂಪಿಸಿದರು.ವರದಿ : ಮಿಥುನ ಕೊಡೆತ್ತೂರು

ಆಳ್ವಾಸ್ ನುಡಿಸಿರಿ :ವೆಬ್ ದುನಿಯಾ ಅವಿನಾಶ್ ವರದಿ

ಅವಿನಾಶ್ ಬಿ.
ಆಳ್ವಾಸ್ ನುಡಿಸಿರಿ ಎಂದರೆ ಒಂದು ರೀತಿಯ ಸಾಹಿತ್ಯದ, ಸಂಸ್ಕೃತಿಯ ಸಿರಿವಂತಿಕೆಯ ಪ್ರದರ್ಶನ. ಇದನ್ನು ನಾವು ಪ್ರಧಾನವಾಗಿ ನೋಡಬಹುದಾದದ್ದು ನುಡಿಸಿರಿಯ ಆಕರ್ಷಕ ಸಭಾ ಮಂಟಪಗಳಲ್ಲಿ, ವೇದಿಕೆಗಳಲ್ಲಿ, ಬಯಲಿನಲ್ಲಿ, ಅಲ್ಲಿ ಮತ್ತು ಇಲ್ಲಿ. ಒಟ್ಟಾರೆಯಾಗಿ ಎಲ್ಲೆಲ್ಲೂ ನಮ್ಮ ಹೆಮ್ಮೆಯ ಜಾನಪದ ಕಲೆಗಳು, ಸಂಸ್ಕೃತಿ ವೈವಿಧ್ಯ ಎಲ್ಲವೂ ಸಮ್ಮೇಳನದ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುವಂತಿತ್ತು.
ಕರಾವಳಿಯ ಇಬ್ಬರು ಸಾಹಿತ್ಯ ದಿಗ್ಗಜರಾದ ವ್ಯಾಸರಾಯ ಬಲ್ಲಾಳ ಸಭಾಂಗಣ, ರತ್ನಾಕರ ವರ್ಣಿ ವೇದಿಕೆಗಳ ಹೆಸರುಗಳೇ ಸಾಹಿತ್ಯಕ್ಕೆ ಸಲ್ಲುವ ಗೌರವದ ಪ್ರತೀಕ. ವಿದ್ಯಾಗಿರಿಯಲ್ಲಿಡೀ ಯಕ್ಷಗಾನದ ಮುಖವರ್ಣಿಕೆಗಳು, ಕಿರೀಟಗಳು ರಾರಾಜಿಸುತ್ತಲೇ ಇರುವುದು ಕಣ್ಣಿಗೆ ಹಬ್ಬ. ಇದರ ಜತೆಗೆ ಅಲ್ಲಲ್ಲಿ ತೂಗುಬಿಟ್ಟಿರುವ ಗೂಡುದೀಪಗಳು ಮನಸೆಳೆಯುತ್ತವೆ.
ಇನ್ನು ವೇದಿಕೆಯತ್ತ ಒಮ್ಮೆ ಕಣ್ಣು ಹೊರಳಿಸಿದರೆ ಸಾಕು, ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದ ಕಿರೀಟಗಳು, ದೇಶದಲ್ಲಿ ಅತ್ಯಧಿಕ ಜ್ಞಾನ ಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯ ಕನ್ನಡದ ಜ್ಞಾನಪೀಠ ಮಹಾನ್ ಚೇತನಗಳ ಪ್ರತಿಕೃತಿ, ಕಲಶ, ದೀಪಗಳ ಸಾಲು ಸಾಲು, ಹೋದಲ್ಲೆಲ್ಲಾ ಕಣ್ಮನ ಸೆಳೆಯುವ ಆಕರ್ಷಕ ಆಕಾಶ ಬುಟ್ಟಿಗಳು... ಇವುಗಳಿಗೆ ಕಲಶವಿಟ್ಟಂತೆ, ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಕೂಡ ನಡೆದಿದ್ದು, ಭತ್ತದ ತೆನೆಗೆ ಹಾಲೆರೆಯುವ ಸಾಂಪ್ರದಾಯಿಕ ಮಾದರಿಯಲ್ಲಿ.
ಅತಿಥಿಗಳು, ಗಣ್ಯರು ಮಾತನಾಡಲು ಬಳಸುವ ಭಾಷಣಪೀಠ (ಪೋಡಿಯಂ) ಅಂತೂ ಎಷ್ಟು ನೋಡಿದರೂ ಮನತಣಿಸುವಂತಿರುವ ಕೆಂಪಡಿಕೆಯ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತದೆ. ಅದಕ್ಕೆ ಭತ್ತದ ತೆನೆ ಕಟ್ಟಿದ ರೀತಿ, ಸಭಾವೇದಿಕೆಯಲ್ಲಿಡೀ ಎದ್ದುಕಾಣುವಂತೆ ಮಾಡುತ್ತದೆ.
ಇದಕ್ಕೆ ಮೊದಲು ನಡೆದ ಮೆರವಣಿಗೆ. ಸಭಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಕನ್ನಡ ಗ್ರಂಥಗಳನ್ನೂ ಮೇನೆಯಲ್ಲಿರಿಸಿ ಕರೆತಂದ ವಿಧಾನ, ಕೇರಳದ ಅಬ್ಬರದ ಚೆಂಡೆವಾದನ, ಯಕ್ಷಗಾನ ವೇಷಗಳು, ಡೊಳ್ಳು ಕುಣಿತ, ಕರಾವಳಿಯ ಹುಲಿವೇಷ ತಂಡ... ಎಲ್ಲವೂ ಈ ಮಣ್ಣಿನ ಸಾಂಸ್ಕೃತಿಕ ವೈಭವವನ್ನು ಸಾರುತ್ತಿತ್ತು.
ಸಭಾಂಗಣವು ತುಳುನಾಡಿನ ಗತ ವೈಭವ ಸಾರುವ, ಪರಂಪರೆಯ ಪ್ರತೀಕವಾಗಿರುವ ಗುತ್ತಿನ ಮನೆಯನ್ನು ನೋಡಿದಂತಾಗುತ್ತದೆ. ತುಳುನಾಡಿನ ಅರಸರ ಮನೆಯನ್ನು ಹೋಲುವ ಇದು, ಕೆತ್ತನೆಶಿಲ್ಪ ಕಲಾ ಸೌಂದರ್ಯದ ಕಂಬಗಳು, ಶಿಲ್ಪ ವೈಭವದಿಂದ ಗಮನ ಸೆಳೆಯುತ್ತದೆ. ಹಿನ್ನೆಲೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ರಾರಾಜಿಸುತ್ತಿದ್ದಾಳೆ.
ಇಷ್ಟೆಲ್ಲಾ ಐಸಿರಿಗಳೊಂದಿಗೆ ನುಡಿಸಿರಿ ನಡೆಯುವಾಗ, ಅಚ್ಚುಕಟ್ಟುತನ, ಸಮಯ ಪ್ರಜ್ಞೆ ಬಗ್ಗೆ ಹೇಳದಿದ್ದರೆ ಸಮ್ಮೇಳನದ ವಿವರವೇ ಅಪೂರ್ಣವಾಗಿಬಿಡಬಹುದು. ಡಾ.ಮೋಹನ್ ಆಳ್ವಾ ಅವರು ಸಮಯಕ್ಕೆ ನೀಡುವ ಮಹತ್ವವು ಪ್ರತಿಯೊಬ್ಬ ಭಾಷಣಕಾರನ ಮೇಲೂ ಪ್ರಭಾವ ಬೀರುತ್ತಿದೆ. ಆಮಂತ್ರಣಪತ್ರಿಕೆಯಲ್ಲಿ ಮುದ್ರಿಸಿರುವ ಸಮಯ ಸಮೀಪಿಸುತ್ತಿರುವಂತೆಯೇ ಪೋಡಿಯಂನಲ್ಲಿ ಎಚ್ಚರಿಕೆಯ ದೀಪವೊಂದು ಬೆಳಗುತ್ತದೆ. ಅಷ್ಟೊತ್ತಿಗೆ ಭಾಷಣಕಾರರು ಆಳ್ವರ ಕ್ಷಮೆ ಕೇಳುತ್ತಾ, ಒಂದು ಹೇಳಲೇಬೇಕಾದ ಪ್ರಸಂಗವನ್ನು ಹೇಳಿ ಮುಗಿಸುತ್ತಿರುವುದನ್ನು ನೋಡಿದರೆ, ಯಾವುದೇ ಭಾಷಣಕಾರ ಕೂಡ ಸಮಯಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಬಲವಾಗಿ ನಂಬಿಕೆ ಇರಿಸಬಹುದು.
ಅತ್ತ ಚೆನ್ನೈ ನಗರಿಯಿಡೀ ಮಳೆಯಿಂದ ತೋಯ್ದು ಹೋಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಇತ್ತ ಮೂಡುಬಿದಿರೆಯಲ್ಲಿಯೂ ಸಮ್ಮೇಳನ ತಾಣಕ್ಕೆ ಒಂದಷ್ಟು ಮಳೆ ಸುರಿದು ಇಂಪಾದ ವಾತಾವರಣವನ್ನು ತಂಪಾಗಿಸಿತು.krupe
Courtesy: ವೆಬ್ ದುನಿಯಾ

ಮಮತಾ.ಜಿ.ಸಾಗರ್ ಕವಿ ಸಮಯ

ನುಡಿಸಿರಿಯ ಮೊದಲದಿನದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಖ್ಯಾತ ಕವಯತ್ರಿ ಮಮತಾ ಜಿ.ಸಾಗರ್ ತಮ್ಮ ಕಾವ್ಯ ಪ್ರೀತಿಯನ್ನು ತೋಡಿಕೊಂಡರು. ಉದ್ಘಾಟನಾ ಭಾಷಣದಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಕನ್ನಡ ಭಾಷೆ ಮಾತನಾಡುವಾಗ ಅನಗತ್ಯವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ದರಿದ್ರ ಬುದ್ಧಿಯನ್ನು ಬಿಡಿ ಎಂದು ಕನ್ನಡಿಗರಿಗೆ ಕರೆ ಕೊಟ್ಟರೆ, ಮಮತಾ ಜಿ. ಸಾಗರ್ ತಮ್ಮ ಭಾಷಣದಲ್ಲಿ ಇಂಗ್ಲೀಷ್ ಪದಗಳನ್ನು ಯಥೇಚ್ಛ ಬಳಸಿ ಕಂಗ್ಲೀಷ್ ಮಾತನಾಡಿದರು.
ನಾನು ನನ್ನ ತಾಯ ಹಾಗೆ ಎಂಬ ಕವನದಿಂದ ತಮ್ಮ ಮಾತು ಆರಂಭಿಸಿದ ಅವರು ತಾನು ಕವನ ಬರೆಯಲಾರಂಭಿಸಿದ್ದನ್ನು ಪ್ರಸ್ತಾವಿಸಿದರಾದರೂ, ಕವನ ಬರೆಯಲು ಆರಂಭಿಸಿದ್ದೇಕೆ, ಪ್ರೇರಣೆಗಳೇನು ಎಂಬ ಬಗ್ಗೆ ಮತ್ತೆ ಹೇಳುತ್ತೇನೆ ಎಂದವರು ಮತ್ತೆ ಹೇಳಲು ಮರೆತೇ ಬಿಟ್ಟರು. ನನ್ನ ಹಾಡಿನ ಜಾಡು, ಜಡಿಮಳೆ ಎಂಬ ಕವನ ವಾಚನದ ಮೂಲಕ ಅವರು ತಮ್ಮ ಮಾತು ಮುಗಿಸಿದರು. ಎಂ.ಎಸ್.ಗಿರಿಧರ್, ಜಿ.ವಸುಧಾ ಮತ್ತಿತರ ಕಲಾವಿದರ ತಂಡ ಮಮತಾ ಜಿ.ಸಾಗರ್ ಅವರ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರೇಕ್ಷಕರಿಗೆ ಸಂಗೀತವನ್ನು ಉಣಬಡಿಸಿತು.

ಕವಿ ಸಮಯ ಕವಿ ನಮನ :ಚಿತ್ರ :ಸುಮಾ ಸ್ಟುಡಿಯೊ ಮೂಡಬಿದರೆ





ಕವಿ ಸಮಯದಲ್ಲಿ ಅಬ್ದುಲ್ ರಶಿದ್ ,ಮಮತಾ.ಜಿ.ಸಾಗರ್ ರಾಧಾಕೃಷ್ಣ ಉಳಿಯತಡಕ ಮೊದಲ ದಿನ ಬಾಗವಹಿಸಿದರು.
ಚಿತ್ರ :ಸುಮಾ ಸ್ಟುಡಿಯೊ

ಜಯಂತ್ ಕೈಕಿಣಿ ಜೊತೆಗೆ ಶೇಖರ್ ಅಜೆಕಾರ್


ಕಥಾ ಸಮಯದಲ್ಲಿ ಜಯಂತ ಕಾಯ್ಕಿಣಿ







ಅಧ್ಯಕ್ಷತೆಗಾಗಿ ಕಣವಿ ಅವರಿಗೆ ಸನ್ಮಾನ


ಚಿತ್ರ:ಧನಂಜಯ ಮೂಡಬಿದರೆ

ಜೀವನದ ಎಲ್ಲ ರಂಗಗಳಲ್ಲಿ ಕರ್ನಾಟಕದ ಸಾಧನೆ ಪಡೆದಿದೆ:ಡಾ|ಚನ್ನವೀರ ಕಣವಿ

ಕರ್ನಾಟಕದ ಸಂಸ್ಕೃತಿಯೆಂದರೆ ಅದು ಸಮನ್ವಯ ಸಾರುವ ಸಂಸ್ಕೃತಿ. ಇಹ ಪರಗಳಲ್ಲಿ, ಭಕ್ತಿ, eನ, ಕರ್ಮಗಳಲ್ಲಿ, ಹಳತು ಹೊಸತರಲ್ಲಿ, ಏಕ ಅನೇಕಗಳಲ್ಲಿ, ಅದು ಸಮನ್ವಯಗೊಂಡಿದೆ. ಒಮ್ಮೊಮ್ಮೆ ಒಳಿತು ಕೆಡುಕುಗಳಲ್ಲೂ ಸಮನ್ವಯ ಕಾಣುವ ದೌರ್ಬಲ್ಯವೂ ಅದರದ್ದಾಗಿದೆ ಎಂದು ಆಳ್ವಾಸ್ ನುಡಿಸಿರಿ ೨೦೦೮ ಸಮ್ಮೇಳನದ ಅಧ್ಯಕ್ಷ ನಾಡೋಜಾ ಡಾಚನ್ನವೀರ ಕಣವಿ ವಿಶ್ಲೇಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ ೨೦೦೮ರ ಮೊದಲನೆಯ ದಿನ ಸಮ್ಮೇಳನಾಧ್ಯಕ್ಷರ ಆಶಯ ಭಾಷಣ ಮಾಡಿದ ಡಾಚನ್ನವೀರ ಕಣವಿ, ಜೀವನದ ಎಲ್ಲ ರಂಗಗಳಲ್ಲಿ ಕರ್ನಾಟಕದ ಸಾಧನೆ ಸಾರ್ಥಕತೆಯನ್ನು ಪಡೆದಿದೆ. ಭಾರತೀಯ ಸಂಸ್ಕೃತಿಗೆ ತನ್ನದೇ ಕಾಣಿಕೆ ನೀಡಿದೆ. ಆಮೂಲಕ ಉಜ್ವಲ ಪರಂಪರೆ ಮುಂದುವರಿಸಿಕೊಂಡು ಬರಲು ಸಹಕಾರಿಯಾಗಿದೆ ಎಂದರು. ಶಾತವಾಹನರನ್ನು ಬಿಟ್ಟರೆ ಕರ್ನಾಟಕವನ್ನು ಅತ್ಯಂತ ಪ್ರಭಾವಶಾಲಿಯಾಗಿ ಆಳಿದ ಪ್ರಥಮ ರಾಜವಂಶ ಎಂಬ ಖ್ಯಾತಿ ಪಡೆದುಕೊಂಡಿರುವ ಕದಂಬ ವಂಶ ಕರ್ನಾಟಕದ ರಾಜಕೀಯಕ್ಕೆ ಔನ್ನತ್ಯ, ಪ್ರಜಾವಾತ್ಸಲ್ಯ, ಪರಮತ ಸಹಿಷ್ಣುತೆ ಮೊದಲಾದ ಶಾಶ್ವತ ಆದರ್ಶಗಳನ್ನು ಹಾಕಿಕೊಟ್ಟಿತು. ವಾಸ್ತುಶಿಲ್ಪ, ಶಿಲ್ಪಕಲೆಗೆ ಆಶ್ರಯವನ್ನಿತ್ತಿತಲ್ಲದೆ ಜನಜೀವನವನ್ನು ಹಸನುಗೊಳಿಸಲು ಪ್ರಯತ್ನಿಸಿತು. ಒಟ್ಟಿನಲ್ಲಿ ಕರ್ನಾಟಕದ ಗೌರವವನ್ನು ಎತ್ತಿಹಿಡಿದ ಅತ್ಯಂತ ಪ್ರಾಚೀನವಾದ ರಾಜವಂಶ ಕದಂಬರದು ಎಂದು ಡಾಕಣವಿ ಅವರು ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಉದಾಹರಿಸಿದರು. ಕನ್ನಡದ ಶಕ್ತಿ ಮತ್ತು ವ್ಯಾಪ್ತಿಯನ್ನು ಒಂದೇ ಕಡೆ ಗುರುತಿಸುವುದಾದರೆ ಅದು ಸರ್ವಜ್ಞನಲ್ಲಿ ಎಂದು ಅಭಿಪ್ರಾಯಪಟ್ಟ ಸಮ್ಮೇಳನಾಧ್ಯಕ್ಷರು, ಭಾಷಾ ಶಕ್ತಿಯಲ್ಲಿ ಅವನನ್ನು ಮೀರಿಸಿದವರು ವಿರಳ ಆತನ ಮಾತುಗಳು ನೇರವಾಗಿ ಜನಮನವನ್ನು ಮುಟ್ಟಿದವು, ತಟ್ಟಿ ಎಚ್ಚರಿಸಿದವು, ಚುಚ್ಚಿ ಎಬ್ಬಿಸಿದವು ಎಂದರು. ವಿವಿಧ ಶಾಸ್ತ್ರಗಳ ಪರಿಣತಿ ಆಳವಾದ ತತ್ವ ಚಿಂತನೆ ಹಾಗೂ ಆತನ ಅನುಭವ ಸರಳವಾದ ತ್ರಿಪದಿಗಳಲ್ಲಿ ಹೊರಹೊಮ್ಮಿತು. ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿತು. ಜನರ ಸಂಸ್ಕೃತಿಯನ್ನು ರೂಪಿಸಿತು. ಸದಾ ಸಂಚಾರ ಕೈಗೊಂಡ ಸರ್ವಜ್ಞ, ಮಹಾಂತ ಜಂಗಮ. ಅಪಾರವಾದ ಜೀವನಾನುಭವ, ಉದಾರವಾದ ಮಾನವೀಯ ಅನುಕಂಪೆ, ಉನ್ನತವಾದ ಆಧ್ಯಾತ್ಮಿಕ ನಿಲುವು, ಇವುಗಳಿಂದ ಮುಪ್ಪುರಿಗೊಂಡ ಜನತಾ ಪ್ರತಿಭೆ ಸರ್ವಜ್ಞನದು ಎಂದು ಡಾಕಣವಿ ಸರ್ವಜ್ಞನ ಸಾಹಿತ್ಯ ಹಾಗೂ ಶಕ್ತಿಯನ್ನು ವಿಶ್ಲೇಸಿದರು.ವಚನ ಸಾಹಿತ್ಯ, ದಾಸ ಸಾಹಿತ್ಯದ ಘಟ್ಟಗಳ ನಂತರ ಶರಣ ಮಾರ್ಗಾವಲಂಬಿಗಳಾದ ಅನುಭಾವಿಗಳು ರಚಿಸಿದ ತತ್ವಪದಗಳು ಜನಜೀವನವನ್ನು ಮುಟ್ಟಿ ಹಸನುಗೊಳಿಸಿದವು. ಇವು ಅನುಭಾವಿಗಳ ರೂಪಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ೧೯ನೇ ಶತಮಾನವನ್ನು ಕನ್ನಡ ಸಾಹಿತ್ಯದ ಬೀಳುಯುಗ ಎಂದು ಕರೆಯುವುದುಂಟು ಆದರೆ ಈ ಯುಗದಲ್ಲಿಯೇ ತತ್ವಪದಗಳ ಪರಂಪರೆ ಶ್ರೀಮಂತವಾಗಿ ಬೆಳೆತು ಎಂದು ಅವರು ಸಾಹಿತ್ಯವನ್ನು ಮತ್ತು ಅದು ಜನಜೀವನವನ್ನು ಪ್ರಭಾವಿಸಿದ ಬಗೆಯನ್ನು ಪ್ರಸ್ತಾವಿಸಿದರು. ೨೦ನೇ ಶತಮಾನದಲ್ಲಿ ತನ್ನ ಸುವರ್ಣ ಯುಗವನ್ನು ಕಂಡ ಕನ್ನಡ ಸಾಹಿತ್ಯ ೨೧ನೇ ಶತಮಾನದಲ್ಲಿ ಆಶಾದಾಯಕವಾಗಿ ಬೆಳೆಯಬಹುದು ಎಂಬ ಭರವಸೆಯನ್ನು ಡಾಕಣವಿ ವ್ಯಕ್ತಪಡಿಸಿದರು. ತಮ್ಮ ಭಾಷಣದುದ್ದಕ್ಕೂ ಅವರು ಪ್ರತಿಭೆ, ಶಕ್ತಿ, ಸಂಸ್ಕೃತಿ, ಸಾಹಸ ಮತ್ತು ಸಂಗೀತಗಳನ್ನು ಪ್ರಸ್ತಾವಿಸಿ ಕನ್ನಡ ಮನಸ್ಸು, ಶಕ್ತಿ ಮತ್ತು ವ್ಯಾಪ್ತಿಯ ಬಗ್ಗೆ ವಿವೇಚಿಸಿದರು. ಸಮಾರಂಭದಲ್ಲಿ ಕನ್ನಡ ಮನಸ್ಸು-ಸಾಹಿತಿಯ ಜವಾಬ್ದಾರಿ ಕೃತಿಯನ್ನು ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು. ನುಡಿಸಿರಿಯ ರೂವಾರಿ ಡಾಮೋಹನ್ ಆಳ್ವಾ ಅವರು ಉದ್ಘಾಟಕರಾದ ಡಾಕೆ.ಎಸ್. ನಿಸಾರ್ ಅಹಮದ್ ಮತ್ತು ಸಮ್ಮೇಳನಾಧ್ಯಕ್ಷ ಡಾಚನ್ನವೀರ ಕಣವಿ ಅವರನ್ನು ಸನ್ಮಾನಿಸಿದರು.
ಕನ್ನಡ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.

ಮೂರು ದಿನಗಳ ಕನ್ನಡ ನಾಡು ನುಡಿಯ ಸಮ್ಮೇಳನ :ವರದಿ:ಶಿಲ್ಪಾಸಂತೋಷ್ ನಮ್ಮ ಟಿ.ವಿ


:ವರದಿ:ಶಿಲ್ಪಾಸಂತೋಷ್ ನಮ್ಮ ಟಿ.ವಿ

ಮೂರು ದಿನಗಳ ಕನ್ನಡ ನಾಡು ನುಡಿಯ ರ್‍ಟ್ರಾಯ ಸಮ್ಮೇಳನ ಆಳ್ವಾಸ್ ನುಡಿಸಿರಿ-೨೦೦೮ ಮೂಡಬಿದರೆಯ ವಿದ್ಯಾಗಿರಿಯಲ್ಲಿರುವ ಶ್ರೀಮತಿ ಸುಂದರಿ ಆನಂದ -ಆಳ್ವ ಆವರಣದ ರತ್ನಾಕರ ವರ್ಣಿ ವೇದಿಕೆಯಲ್ಲಿ ಇಂದು ಸಮ್ಮೇಳನ ಆರಂಭಗೊಂಡಿತು

ವ್ಯಾಸರಾಯ ಬಲ್ಲಾಳ ಸಭಾಂಗಣದಲ್ಲಿ ತುಳುನಾಡಿನ ಗುತ್ತು ಮಾದರಿಯಲ್ಲಿ ವಿಶೇಷ ಅಲಂಕಾರದೊಂದಿಗೆ ನಿರ್ಮಾಣಗೊಂಡ ರತ್ನಾಕರ ವರ್ಣಿ ವೇದಿಕೆಯಲ್ಲಿ ಸಾಹಿತಿ ಡಾಕೆ.ಎಸ್.ನಿಸಾರ್ ಅಹಮದ್ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ೨೦೦೬ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗಲೂ ವೇಷ ಬದಲಿಸಲು ನಾನು ಒಪ್ಪಿರಲಿಲ್ಲ. ಈಗ ಮೋಹನ ಆಳ್ವರ ಒತ್ತಾಯಕ್ಕೆ ಮಣಿದು ವೇಷಾಂತರಗೊಂಡಿದ್ದೇನೆ ಎಂದರು.
ನುಡಿಸಿರಿಯನ್ನು ಮುಕ್ತಮನದಿಂದ ಪ್ರಶಂಸಿಸಿದ ಅವರು ಭಾವನಾತ್ಮಕ ಮಜಲಿನಲ್ಲಿ ಹೃದಯವನ್ನು ಹತ್ತಿರವಾಗಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ. "ಘಟನೆಗೊಳ್ಳುತ್ತಿರುವ ಸಾಮಾಜಿಕ ಸ್ಥಿತಿಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ನಡೆಸುವ ಕೆಲಸ ಮಹೋಪಕಾರದ್ದು ಎಂದು ಬಣ್ಣಿಸಿದರು.
ಇಂತಹ ಸಮ್ಮೇಳನಗಳಿಗೆ ಕೆಲ ಇತಿ ಮಿತಿಗಳಿವೆ ಎಂದ ಅವರು ಇಲ್ಲಿ ಸುವರ್ಣ ಮಧ್ಯಮ ಮಾರ್ಗ ಅನುಸರಿಸುವುದು ಉಚಿತ. ಅಕಾಡೆ"ಕ್ ಆಸಕ್ತಿಂದ ಬರುವವರಿಗೂ, ಮನರಂಜನೆಯ ಆಸಕ್ತಿಯಿಂದ ಬರುವವರಿಗೂ ಸಮಾನ ನ್ಯಾಯ ಒದಗಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವ ಸಂದರ್ಭದಲ್ಲಿ ನಡೆಯುತ್ತಿರುವ ನುಡಿಸಿರಿಗೆ ವಿಶೇಷ ಮಹತ್ವ ಇದೆ. ಕನ್ನಡಿಗರು ಜಡತ್ವವನ್ನು ಕೊಡ"ಕೊಂಡು ಕನ್ನಡ ನುಡಿಯನ್ನು ಬಳಸಬೇಕು. ಕನ್ನಡ ಮಾತನಾಡುವಾಗ ಇಂಗ್ಲೀಷ್ ಪದಗಳನ್ನು ಬಳಸುವ ದುರಭ್ಯಾಸವನ್ನು ತೊಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಲ್ಲೂರು ಪ್ರಸಾದ್ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷ ನಡೆಸುವ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಿಸಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ. ಈ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸುವುದರಿಂದ ಅದು ಒಂದು ಜಾತ್ರೆಯಾದರೂ ಸಮ್ಮೇಳನದ ಸ್ವರೂಪ ಬದಲಾಸುವ ಉದ್ದೇಶ ಇಲ್ಲ ಎಂದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಪ್ರತಿ ವರ್ಷ ಒಂದೊಂದು ವಿಷಯಕ್ಕೆ ಸಂಬಂಧಿಸಿ ಸಮಾವೇಶ ನಡೆಸುತ್ತದೆ. ಮೊದಲ ಸಮಾವೇಶ ಧಾರವಾಡದಲ್ಲಿ ನಡೆಯಲಿದೆ ಯುವ ಸಾಹಿತ್ಯ ಸಮಾವೇಶ ಹೆಸರಿನಡಿ ನಡೆಯುವ ಈ ಸಮಾವೇಶದಲ್ಲಿ ಸಾಹಿತ್ಯದ ಮತ್ತು ಭಾಷೆಯ ಆಧುನಿಕ ಅವಸ್ಥಾಂತರದ ಬಗ್ಗೆ ಚರ್ಚೆಯಾಗಲಿದೆ. ಇದರಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ನುಡಿಸಿರಿಯ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂ.ಮೋಹನ್ ಆಳ್ವ, ಶ್ರೀ ಆನಂದ ಆಳ್ವ, ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಸಮ್ಮೇಳನಾಧ್ಯಕ್ಷ ನಾಡೋಜಾ ಡಾಚನ್ನವೀರ ಕಣವಿ ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ವೈಭವದ ಸಾಂಸ್ಕೃತಿಕ ನಡೆಯಿತು.

ನುಡಿಸಿರಿ ಸಭೆ : ಧನಂಜಯ ಮೂಡಬಿದರೆ ಚಿತ್ರಗಳು











ನಿಸಾರ್ ಅಹಮದ್ ಉದ್ಘಾಟಿಸಿದಾಗ


Thursday, November 27, 2008

ನುಡಿಸಿರಿ ಜನಗಣ




ನುಡಿಸಿರಿ ಉದ್ಘಾಟಕರು ನಿಸಾರ್ ಅಹಮ್ಮದ್


ನುಡಿಸಿರಿ ಉದ್ಘಾಟಕರು ನಿಸಾರ್ ಅಹಮ್ಮದ್

ನುಡಿಸಿರಿ ಅಧ್ಯಕ್ಷರು


ಧನ್ಯವಾದ ವಿಶಿಷ್ಟ ಶೈಲಿಯಲ್ಲಿ

ಧನ್ಯವಾದ ವಿಶಿಷ್ಟ ಶೈಲಿಯಲ್ಲಿ
ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಶೈಲಿಯಲ್ಲಿ ಹಾಡಿದರು.
ಬಿದಿರುಗಳೆಲ್ಲ ಕೊಳಲುಗಳಾಗಿ
ಎದುರು ನುಡಿದೆ ಮೋಹನರಾಗ
ಪದುಮ ನುಡಿಸಿರಿ ಪಂಚಮದ ಸಂಭ್ರಮದಲಿ ನಡೆಸುತ
ಉದಾತ್ತ ಚರಿತ ಕಣ್ವಿ ಕವಿಶ್ರೀ
ವದನ ರಾರಾಜಿಸುಗೆ ನುಡಿಶ್ರೀ
ವಿದಿತ ನಾಡೋಜ ಕವಿ ನಿಸಾರರಿಗೆ ನಮಿಸುತಲಿ ಕೈ

ಬಂದಿಹರು ನಲವಿಂದ ನಮ್ಮವ
ರಿಂದು ವರ ಅಭ್ಯಾಗತ ಮುಖ್ಯ
ಇಂದು ಕಲಾತಿಲಕ
ವರನಲ್ಲುರಾಯರಿಂಗೊಂದಿಸುತ ಚಂದಗೊಳಿಸಿದ ಭಯಚಂದ್ರಾಬಂಧುವನ್ದಡಿ
ಅಮರನಾಥ ಸಂಗತ ಮಾಧ್ಯಮ ಜನ ಸಾಗರಕೆ ಅಭಿನಂದಿಸುತ
ರಚನೆ: ಟಿ.ಎ.ಎನ್ ಖಂಡಿಗೆ

ಸಂಭ್ರಮದ ಉಧ್ಘಾಟನೆ


ಸಂಭ್ರಮದ ಉಧ್ಘಾಟನೆ ಕಾಲೇಜಿನ ಪ್ರವೇಶ ದ್ವಾರದಿಂದ ಸಕಲ ಸಡಗರದೊಂದಿಗೆ ನುಡಿಸಿರಿಯ ಆಧ್ಯಕ್ಷತೆ ವ"ಸಿರುವ ಚೆನ್ನ"ರ ಕಣ"ಯವರನ್ನು ಪಲ್ಲಕ್ಕಿಯಲ್ಲಿ ಕರೆತರಲಾತು. ಕೀಲು ಕುದುರೆ,ಕೊಂಬು,ಕಹಳೆ, ಕೇರಳ ಮತ್ತು ಊರಿನಶೈಲಿಯ ಚೆಂಡೆಗಳು ಮೆರವಣಿಗೆಗೆ "ಶೇಷ ಕಳೆಯೇರಿಸಿತು.ಕಾರ್ಯಕ್ರಮವನ್ನು ನಿತ್ಯೋತ್ಸವದ ಕ" ನಿಸಾರ್ ಅಹಮ್ಮದ್ ಉದ್ಘಾಟಿಸಿದರು.ಕನ್ನಡ ಸಾ"ತ್ಯ ಪರಿಷತ್ ಆಧ್ಯಕ್ಷ ನಲ್ಲೂರು ಪ್ರಸಾದ್ ಮುಖ್ಯ ಅಥಿತಿಗಳಾಗಿದ್ದರು.ಆಮರನಾಥ ಶೆಟ್ಟಿ,ಆಭಯಚಂದ್ರ ಜೈನ್,ಆನಂದ ಆಳ್ವ ಉಪಸ್ಥಿತರಿದ್ದರು.ಗುತ್ತಿನ ಮನೆಯ ವೈಭವದ ವೇದಿಕೆ ಗಮನಸೆಳೆತು.

ಕಳೆಕಟ್ಟುತ್ತಿರುವ ನುಡಿಸಿರಿ

ಕಳೆಕಟ್ಟುತ್ತಿರುವ ನುಡಿಸಿರಿ

ಗುರುವಾರ ರಾತ್ರಿಯಿಂದಲೇ ದೂರದ ಊರಿನಿಂದ ವಿದ್ಯಾರ್‍ಥಿಗಳು,ಇತರ ಪ್ರತಿನಿಧಿಗಳು

ಆಗಮಿಸುತಿದ್ದು,ಅಳ್ವಾಸ್‌ನ ಸುಂದರಿ ಆಳ್ವ ಕ್ಯಾಂಪಸ್ ಹೊಸ ಕಳೆಯೊಂದಿಗೆ ಶೋಭಿಸುತ್ತಿದೆ.

೯.೧೫ಕ್ಕೆ ಮೆರವಣಿಗೆ ಆರಂಭವಾದರು ೮.೩೦ ಯಿಂದಲೇ ಚೆಂಡೆ,ವಾ॓ದ್ಯ,ಕೊಂಬು ಸದ್ದು ಮಿತವಾಗಿ ಮೊಳಗುತಿತ್ತು.

ಅತಿಥಿಗಳು ಈಗಾಗಲೇ ಆಗಮಿಸಿದ್ದಾರೆ.
ನಿರಂತರ ಸುದ್ದಿ ಫೋಟೊ ಮಾಹಿತಿಗಳನ್ನು ನೀಡಲು ನಾವು ಫ್ರಯತ್ನಿಸುತಿದ್ದೇವೆ

ಶೇಖರ ಅಜೆಕಾರು ಮತ್ತು ತಂಡ

ಆಳ್ವಾಸ್ ನುಡಿಸಿರಿ ಬರದ ಸಿದ್ಧತೆ







ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮೂರು ದಿನಗಳ ಆಳ್ವಾಸ್ ನುಡಿಸಿರಿ ಬೆಳಗ್ಗೆ ೯.೧೫ ಕ್ಕೆ ಸಂಪನ್ನಗೊಳ್ಳಲಿದೆ.ನಿಸಾರ್ ಅಹಮ್ಮದ್ ಅವರು ಸಮ್ಮೆಲನ ಉದ್ಘಾಟಿಸುವರು.ಅಭಯಚಂದ್ರ ಜೈನ್,ಅಮರನಾಥ್ ಶೆಟ್ಟಿ, ಮೊಹನ್ ಆಳ್ವಾ ಉಪಸ್ತಿತರಿರುವರು.

ನೆಲ್ಲಿತೀರ್ಥ ವಿಶೇಷ ಸ್ಥಳ

Nellitheertha a specila place for all
News and photos Shekar Ajekar

After Karnataka’s Minister Shobha Karadlajes visit and donation of Ten Lakh Rupees, famous Nelliteertha Somanatherwara Temple is once again in news.She ogffered a simple poooja and some offering before election and it came true.
We want to improve the basic emenitiese in this area for all devotees who visits this place. We are in need of help from devotees said Mr.P.Subraya Bhat managing Trustee, when our correspondent visit the place with some of his students .
One of the Canadian Traveler recorded in his portal that there is no place like Nellitheertha cave temple in entire world.
Here we have scroll for furlongs with help of lamp and a guide.Chethan Kumar is guiding here with great enthusiasm and giving needy explanation.
Temple offers annadanam (meals) two times a day in order to help the devotees.
While inside the caves one can feel a special experience. theertha and Mruttika with defferent smell is recommendable things here. The natural caves with some specialties naturally attract more and more people.
The trustees have already prepared one crore rupees plan to improve the infrastructure in this Kshethra.


Historical place: The holy place Nellitheertha and the temple have a long and glorious history. Although the first recorded material mentioning Nellitheertha dates back to 1487 A.D, there is ample evidence available at the place to suggest that the temple existed much before that. At its glorious peak, there used to be daily festivities performed under the aegis of the ruler of Nellitheertha. From that grand state, the temple gradually declined and its existence itself was threatened towards the later part of the twentieth century. Since then, devotees and well wishers have got together to restore the temple to its previous grandeur and the temple renovation work is now on in full swing.
In the state of Karnataka and indeed in entire India, the South Kanara district occupies a unique place. The evergreen forests, amazing flora and fauna, the numerous temples and places of worship and monuments all make this district a huge attraction. The lifestyle of the people here exemplifies the concept of unity in diversity. For the people of Dakshina Kannada, art worship is a means of reaching the God and enriching the culture of the land. Naturally, therefore, one can observe the people seeing God in everything they do. Throughout the land, beautiful caves and lakes have become centers of spiritual and religious significance. Also, this land has given a multitude of scholars, artists, kings and other great contributors to the nation.
Historically, the Nellitheertha region was under the administration of the Chowta family. The chowtas are a famous name in Tulu Naadu and it is said that the temple flourished under their administration and was a major center for religious and cultural activities under their reign. Even today, the descendants of the chowta clan take an active interest in the maintenance and development of the temple.
There are some artifacts and archeological evidence available at the temple which point to a Jain interest and influence at the temple. These are evidence to suggest that the temple and the region was probably under the administration of Jain kings of the region.

The name Nellitheertha also has its etymological roots in the cave. Inside of the cave, drops of water, in the shape of amla (gooseberries) constantly keep dripping down. In fact, the lake is made up of these drops of water. Hence the name Nelli (Amla) Theertha (holy water). Another unique aspect of the cave is that it is closed for nearly 6 months a year. The cave is open only between October and April. Though there are religious reasons associated with this (it is said that the cave is open 6 months a year for humans and is meant for Gods and Rishis the remaining 6 months), the point is that the 6 month break each year helps the cave to "rejuvenate". The water freshens up and the animals inside enjoy the lack of disturbance. Yes, there are plenty of animals inside the cave. Most common among them are snakes (of all varieties), scorpions, porcupines and thousands of bats. These are considered sacred and troubling or hurting the animals in any manner is strictly forbidden.
Legend also has it that Maharshi (Saint) Jabali used this cave as his abode. Hence the name Jabaleshwara for the presiding deity. It is believed that Maharshi Jabali performed Tapas (penance) here to Lord Durgaparameshwari to request her to kill Arunasura (a demon). It is said that Sri Durga acceeded to Jabali's request and destroyed Arunasura at Kateel (another fabulous and famous temple town - very close to Nellitheertha). There is a spot inside the cave which is widely believed to be where Maharshi Jabali perfomed his Tapas.
The name Nellitheertha also has its etymological roots in the cave. Inside of the cave, drops of water, in the shape of amla (gooseberries) constantly keep dripping down. In fact, the lake is made up of these drops of water. Hence the name Nelli (Amla) Theertha (holy water). Another unique aspect of the cave is that it is closed for nearly 6 months a year. The cave is open only between October and April. Though there are religious reasons associated with this (it is said that the cave is open 6 months a year for humans and is meant for Gods and Rishis the remaining 6 months), the point is that the 6 month break each year helps the cave to "rejuvenate". The water freshens up and the animals inside enjoy the lack of disturbance. Yes, there are plenty of animals inside the cave. Most common among them are snakes (of all varieties), scorpions, porcupines and thousands of bats. These are considered sacred and troubling or hurting the animals in any manner is strictly forbidden.
Legend also has it that Maharshi (Saint) Jabali used this cave as his abode. Hence the name Jabaleshwara for the presiding deity. It is believed that Maharshi Jabali performed Tapas (penance) here to Lord Durgaparameshwari to request her to kill Arunasura (a demon). It is said that Sri Durga acceeded to Jabali's request and destroyed Arunasura at Kateel (another fabulous and famous temple town - very close to Nellitheertha). There is a spot inside the cave which is widely believed to be where Maharshi Jabali perfomed his Tapas.
The main deity of the temple is Sri Somanatheshwara (Shiva). The temple also has MahaGanapati (Elephant - headed God) and Jabali Maharshi as deities here. In fact, the Jabali Maharshi Brindavana was recently constructed. In typical Tulu-naadu (Tulu is the native language in this part of the woods) tradition, the temple also has its set of "Bhootas". Bhootas are considered as the "Ganas" or warrior-assistants of the Gods. According to mythology, bhootas are appointees of Shiva and they administer the temple/village. The main bhootas of the Nellitheertha temple are Pili-Chamundi (Pili means Tiger in Tulu), Kshetrapala, Raktheshwari and Doomavathy.
The Lingam of Shri Somanatheshwara has been made out of pure Saligrama and is considered very sacred. The Lingam has been built as Ardhanareeshwara. There are other artifacts in and around the temple which are pointers to the past glory of this place. Among them are the “Arasule Mancha” (King’s seat), “Arasule Mantapa” (King’s abode) and the “Jina Vigraha” (Jain Statue). The temple of Shri Mahaganapati has been rebuilt recently and is splendid in itself.
The most beautiful aspect of the temple is the Cave. Apart from the cave, of course, there are numerous other places surrounding the temple which are worth visiting. To the east of the temple’s entrance is the Amblattapadavu hillock. This hillock is about 300-500 feet high and offers a splendid scenery from the top. One can spot places such as the Bajpe Airport, Mangalore, Panambur, the MRPL refinery and Suratkal. On a day with clear skies, one can even spot the Arabian Sea. Amblattapadavu offers a wonderful view of sunrise and sunset everyday.
The “Nagappa Kere” (Snake Pond) is a small pond situated to the north of the temple. This natural pond, along with its religious significance, is also a scenic spot. All devotees who want to enter the cave temple have to clean themselves by taking bath in this pond and only then are they allowed into the cave. The lake is at its best immediately after the monsoons (Oct—Dec) when its crystal clear water is a swimmer’s delight. There are plans to build a small herbal park around this pond as also a small deer park.
The “Arasule Mancha” or King’s seat is situated near the main entrance of the temple towards the north. Historical evidence suggests that this seat was where the king of the land used to be seated when he visited the temple. It is believed that even today, the spirits of the former rulers visits the place at night and so it is prohibited to sit on the seat after dusk.
The Nellitheertha temple is a symbol of secularism. The temple and the cave is open to members of all beliefs and castes. Any person, above the age of 5, is allowed to enter the cave irrespective of gender. Truly, Nellitheertha is a special and model place.
Every year, around the last week of December, the Nellitheertha temple conducts its annual Jaatre (festival). This is a grand five day event full of religious and cultural ceremonies. One thing that strikes a visitor to the Jaatre is the sheer number of rituals and ceremonies associated with this event. Though it may appear superstitious to the "non-believer", it is a fascinating experience. Simpy put, the Jaatre is the instrument the villagers use to express their gratitude and respect to the Gods and Bhootas. They offer their prayers to the Gods and Bhootas and seek their continued protection and pray for good rains and harvests year after year.
The festival starts on the 14th day of the Shukla Paksha in Dhanur Maasa. Typically, this falls on the last week of December or the first week of January. The festival begins with a silver flag being hoisted to indicate the beginning of the Jaatre. This is called "Kodi" or "Dhwajaarohana" ceremony.
Each of the four days has separate ceremonies like the "Balis" where the idol of the presiding deity is carried around the temple for a procession accompanied by music, the "Rudrabhishekas" where the Shiva Lingam is given a grand shower with 101 vessels of water and the "Rathotsava" where the deity is taken on a procession on the chariot.
The climax of the festival is on the fourth day. Called the "Aarat" in local language, the ceremonies on this day mark the end of the festival. During the day, the presiding deity is taken on a procession in the Ratha or the chariot. Villagers offer their prayers during the procession. There is also an event called as the Pilchandi Bheti (meeting of Pili-Chamundi with the Lord) where the Bhoota offers its prayers to the Lord during the procession and seeks his blessings and vows to carry on the role of protecting Dharma in the region. The rituals are followed by a grand lunch for one and all. The food on this day is considered as God’s prasadam and no one leaves without having some.
The rest of the ceremonies start late in the evening and goes on till dawn next day. The deity is taken on a procession and villagers offer "Katte Pooje" or "Platform Pooja" to the deity as it passes their residence. The deity is taken to the temple pond and is given a bath there. Devotees also take bath along with the deity as its considered extremely sacred to do so. On the return journey to the temple, again, several Katte Poojes are offered. Finally, the flag is brought down to indicate the closure of the festival.
The next day, respect is offered to the Bhootas in the form of the Bhoota Kola. This is a dance ritual where a man assumes the role of a Bhoota and performs a set of rituals. It is believed that the Bhoota enters the body of the person during the Kola. Locals revere the ceremony a lot and the word of the person, performing the dance, during the kola is considered law. Even today, local disputes are settled during the Kola. The grandest of all Bhoota kolas is that of the "Pili Chamundi" Bhoota. It is a treat to the eyes what with the variety of colors on display. The kolas start early in the evening and continue till dawn the next day.
How to reach Nellitheertha :In Mangalore city, from “Jyoti Talkies”.Catch a bus that is going to Moodabidri/Karkala. There are many buses on this route.Get down at Yedapadavu. This comes after Vamanjoor, Gurupura and Kaikamba. Distance travelled is approximately 20kms.Take an autorickshaw from Yedapadavu to Nellitheertha. The distance is about 10kms and the standard charges are about Rs 90 (the auto comes back empty, so its cheap. Really!!). Of course, you can catch the “Muchur” buses from Hampankatta bus stand in Mangalore that will directly drop you to Nellitheertha. Frequency is about one every hour from 7am to 6pm.

Friday, November 14, 2008

ಸುಸ್ವಾಗತ

ಇದೊಂದು ವಿಶೇಷವಾದ ಪ್ರಯತ್ನ.
ಪ್ರತಿಯೊಂದು ವಿಷಯಗಳಿಗೂ ಒಂದು ಒಳ ಲಿಂಕ್ ನೀಡುವ ,ಸಾದ್ಯವಾದಷ್ಟು ವಿಷಯಗಳನ್ನು ಓದುಗರಿಗೆ ಉಣ ಬಡಿಸುವ ಪ್ರಯತ್ನ ಇದು.