Friday, November 28, 2008

ಸೋನಿಯಾ, ಸುಷ್ಮಾ ಕನ್ನಡ ಮಾತಾಡಿದ್ರೆ ಚಪ್ಪಾಳೆ, ಮಗು ಮಾತಾಡಿದ್ರೆ ಪೆಟ್ಟು!

ವರದಿ ಮಿಥುನ ಕೊಡೆತ್ತೂರು
ಸೋನಿಯಾ, ಸುಷ್ಮಾ ಕನ್ನಡ ಮಾತಾಡಿದ್ರೆ ಚಪ್ಪಾಳೆ, ಮಗು ಮಾತಾಡಿದ್ರೆ ಪೆಟ್ಟು!
ಮೂಡುಬಿದ್ರೆ : ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ಕನ್ನಡದಲ್ಲಿ ನಮಸ್ಕಾರ ಅಚಿದ್ರೆ ಚಪ್ಪಾಳೆ ಹೊಡೆಯುತ್ತೇವೆ. ನಮ್ಮ ಮನೆ ಮಗು ಕನ್ನಡ ಮಾತಾಡ್ರೆ ಹೊಡೆದು ಇಂಗ್ಲಿಷ್‌ನಲ್ಲಿ ಮಾತಾಡಿಸ್ತೇವೆ.ಸಿನಿಮಾ ನೋಡಿ ಬಂದು ಮನೆಯಲ್ಲಿ ಕಥೆ ಹೇಳುತ್ತೇವೆ. ಸಿನಿಮಾಕ್ಕೆ ಕಷ್ಟ ಪಟ್ಟು ಪಡೆದ ಟಿಕೆಟಿ ಕಥೆಯನ್ನೂ ಹೇಳುತ್ತೇವೆ.ಸಾಗರದಿಂದ ಶಿವಮೊಗ್ಗಕ್ಕೆ ಡೈಲಿ ಬಸ್ಸು ಬರುತ್ತದೆ ಅಚಿದ್ರೆ ಅದು ಕಥೆ ಅಲ್ಲ. ಬಸ್ಸು ಬರಲಿಲ್ಲ ಅಚಿದ್ರೆ ಕಥೆ ಆರಂಭವಾಗುತ್ತದೆ!ನಮ್ಮೂರಲ್ಲೊಬ್ಬ ಮರುಳ ಇದ್ದ. ದಿನಾ ಬೆಳಿಗ್ಗೆ ಬಾರೋ ಬಾರೋ ಅಚಿತ ಕೂಗುತ್ತಿದ್ದ. ಸೂರ್‍ಯ ಹುಟ್ಟುತ್ತಿದ್ದ. ಸಂಜೆ ಹೋಗೋ ಹೋಗೋ ಅನ್ನುತ್ತಿದ್ದ. ಸೂರ್‍ಯ ಮುಳುಗುತ್ತಿದ್ದ!ನಮ್ಮೂರಿಗೊಮ್ಮೆ ಏಣಗಿ ಬಾಳಪ್ಪನವರ ನಾಟಕ ಕಂಪೆನಿ ಬಂದಿತ್ತು. ಅದರಲ್ಲಿ ಹಾಡುತ್ತಿದ್ದ ಒಬ್ಬರಿಗೆ ಕಣ್ಣು ಕಾಣುತ್ತಿರಲಿಲ್ಲ. ನಾಟಕ ಕಲಾವಿದರೊಂದಿಗೆ ಅವರೂ ಸಮುದ್ರ ತೀರಕ್ಕೆ ಸೂರ್‍ಯಾಸ್ತ ನೋಡಲು ಬರುತ್ತಿದ್ದರು. ನಾವೂ ಅವರ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದೆವು. ಸೂರ್‍ಯಾಸ್ತಮಾನವಾಗುತ್ತಿದ್ದಂತೆ ಆಯ್ತೇನಪ್ಪ? ಅಂತ ಕೇಳುತ್ತಿದ್ದರು. ಹೌದು ಅಂದಾಗ ಎದ್ದು ಹೊರಡುತ್ತಿದ್ದರು. ಅವರಿಗೆ ಅದೇನು ಸೂರ್‍ಯಾಸ್ತಮಾನ ಕಾಣುತ್ತಿತ್ತೋ? ನಮ್ಮ ಮನೆ ಪಕ್ಕದ ಹೆಂಗಸೊಬ್ಬರಿಗೆ ಮಕ್ಕಳಿರಲಿಲ್ಲ. ಆದರೆ ಆ ಮನೆಯಲ್ಲಿ ಅವರ ಅಕ್ಕನ ಮಕ್ಕಳಿದ್ದರು. ಹೆಂಗಸಿಗೆ ಮೈತುಂಬ ರೋಗವಾಗಿ ಆ ಮನೆಗೆ ಯಾರೂ ಬರುತ್ತಿರಲಿಲ್ಲ. ಆಕೆಯ ಅಕ್ಕನ ಮಕ್ಕಳಿಗೆ ಮದುವೆಯಾಗಲು ಗಂಡುಗಳು ಬರುತ್ತಿರಲಿಲ್ಲ. ಆಗ ನಮ್ಮ ಮನೆಗೆ ಬಂದ ಆಕೆಯ ಅಕ್ಕ, ತಂಗಿ ನಂಗೆ ಮಾತ್ರೆ ತಂದು ಕೊಡಿ, ನಾನು ಸಾಯುತ್ತೇನೆ ಅಂದದ್ದಕ್ಕೆ ಮಾತ್ರೆ ತಂದುಕೊಟ್ಟೆವು. ಆದರೆ ಆಕೆ ನಾಳೆ ತಿನ್ನುತ್ತೇನೆ ಅಂತಿದ್ದಾಳೆ ಅಂತ "ಷಾದದಿಂದ ಹೇಳುತ್ತಿದ್ದರು. ಒಂದೆಡೆ ಬದುಕುವ ಆಸೆ, ಇನ್ರ್ನೆಂದೆಡೆ ಸಾಯದಿರುವ "ಷಾದ. ಮುಂಬುಯಲ್ಲಿ ಪ್ರಾಣ ಒತ್ತೆ ಇಟ್ಟು ಸೈನಿಕರು ಉಗ್ರರೊಂದಿಗೆ ಕಾದಾಡುತ್ತಿದ್ದಾರೆ. ನಾ"ಲ್ಲಿ ನೆಮ್ಮದಿಯಾಗಿ ನುಡಿಸಿರಿಯಲ್ಲಿದ್ದೇವೆ. ನಾ"ಲ್ಲಿ ಖುಯಲ್ಲಿರುವುದಕ್ಕೆ ಸೈನಿಕರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ ಎಂಬುದು ತಿಳಿದಿರಬೇಕು.ಮುಂಬೈಯಲ್ಲಿ ಜೋರು ಮಳೆ, ನೆರೆಯಾಗಿ ಹೊರಗೆಲ್ಲ ನೀರು, ಆದರೆ ನಮಗೆ ಕುಡಿಯಲು ನೀರು ಸಿಗುವುದು ಕಷ್ಟವಾತು.ಮುಂಬೈ ರೈಲ್ವೆ ನಿಲ್ದಾಣದಲ್ಲಿ ಯುವತಿ ಹುಚ್ಚಿಯೊಬ್ಬಳು ಎದ್ದು ನಿಂತಾಗ ಸಾಲಾಗಿ ನಿಂತಿದ್ದ ಯುವತಿಯರು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.ಹೀಗೆ ಪುಟ್ಟ ಪುಟ್ಟ ಘಟನೆಗಳನ್ನು ಹೇಳಿ ತನ್ನ ಕಥೆಗಳ ಪ್ರೇರಣೆಯನ್ನು ನುಡಿಸಿರಿಯ ಈ ಬಾರಿಯ ವಿಶೇಷ ಕಥಾ ಸಮಯದಲ್ಲಿ ವಿವರಿಸಿದವರು ಮುಂಗಾರು ಮಳೆಯ ಅನಂತರ ಐವತ್ತಕ್ಕೂ ಹೆಚ್ಚು ಸಿನಿಮಾ ಗೀತೆಗಳಿಂದ ಖ್ಯಾತರಾದ ಕಥೆಗಾರ ಜಯಂತ ಕಾಯ್ಕಿಣಿ.ಕಥೆ ಕೇವಲ ದಾಖಲೆಗಳಲ್ಲ. ಉಳಿದ ಜೀವನಗಳಲ್ಲಿ ಮಾನವೀಯ ವಿನ್ಯಾಸಗಳನ್ನು ಕಾಣಬೇಕು. ನಾನು, ನನ್ನ ಹೆಂಡ್ತಿ, ನನ್ನ ಹೆಲ್ಮೆಟ್, ನಾನು ಕಾಫಿ ಕುಡಿಯುವ ಶಾಂತಿ ಭವನ ಇ೦ತಹ ಸ್ವಾರ್ಥಿಯಾಗಬಾರದು ಎಂದು ಕಾಯ್ಕಿಣಿ ಹೇಳಿದರು. ಏನು ಬರೆದ್ರೂ ಪ್ರಿಂಟಾಗುವ ವಿಫುಲತೆಯ ಡೇಂಜರ್ ಸ್ಥಿತಿ ಈಗ ಇದೆ. ಅತ್ಯಂತ ಕಷ್ಟಕರವಾದ ಕಥೆ, ಕವಿತೆ ಬರೆದಾಗ ಆತನ ಸೀಮೆಗಳು ಹಿಗ್ಗುತ್ತವೆ ಎಂದು ಅವರು ಹೇಳಿದರು. ದಿವ್ಯಶ್ರೀನಿರೂಪಿಸಿದರು.

No comments: