Saturday, November 29, 2008

ಅನ್ಯ ಭಾಷೆ ಸಾಹಿತ್ಯದ ಪ್ರಭಾವಕ್ಕಿಂತ ಕನ್ನಡದ ಪ್ರಭಾವ ಮುಖ್ಯ-ಅರವಿಂದ ಮಾಲಗತ್ತಿ




ವರದಿ : ಮಿಥುನ ಕೊಡೆತ್ತೂರು.


ಅನ್ಯ ಭಾಷೆ ಸಾಹಿತ್ಯದ ಪ್ರಭಾವಕ್ಕಿಂತ ಕನ್ನಡದ ಪ್ರಭಾವ ಮುಖ್ಯ-ಅರವಿಂದ ಮಾಲಗತ್ತಿ


ವಿದ್ಯಾಗಿರಿ : ಅನ್ಯ ಭಾಷಾ ಸಾಹಿತ್ಯದಿಂದ ತಾನು ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ಬದಲು ಕನ್ನಡ ಸಾಹಿತ್ಯದಿಂದ ಪ್ರಭಾವಕ್ಕೊಳಗಾಗಿದ್ದೇನೆ ಎಂದು ಹೇಳುವ ಮೂಲಕ ನಮ್ಮ ತಲೆ ಕೆಳಗಾದ ಆಲೋಚನಾ ಕ್ರಮವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಡಾ. ಅರವಿಂದ ಮಾಲಗತ್ತಿ ಹೇಳಿದರು.ನುಡಿಸಿರಿಯ ಎರಡನೆಯ ದಿನವಾದ ಶುಕ್ರವಾರ ಸಮ್ಮೇಳನದ ಎರಡನೆಯ ವಿಚಾರ ಗೋಷ್ಟಿ ಕನ್ನಡ ಸಾಹಿತ್ಯ : ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಆಧುನಿಕ ಸಾಹಿತ್ಯ ಹೊಸ ಸಂವೇದನೆಗಳ ಕುರಿತು ಮಾತನಾಡಿದ ಮಾಲಗತ್ತಿ, ಕನ್ನಡಕ್ಕೆ ೭ eನಪೀಠ, ೫೫ಕೇಂದ್ರ ಅಕಾಡಿಯ ಪ್ರಶಸ್ತಿಗಳು ಬಂದಿವೆ. ಹೀಗೆ ಪ್ರಶಸ್ತಿಗಳು ಬಂದಾಗ ವಾದಗಳೂ ಆಗಿವೆ. ಹಾಗಾಗಿ ಪ್ರಶಸ್ತಿಗಳೇ ಸಾಹಿತ್ಯ, ಕೃತಿಗಳ ಮಾನದಂಡವಲ್ಲ.ಪ್ರಪಂಚದ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಸ್ಥಾನವಿದೆ. ಕನ್ನಡದಲ್ಲಿ ವೈಚಾರಿಕ ಸಾಹಿತ್ಯ ಪ್ರಬುದ್ಧವಾಗಿ ಬಂದಿದೆ. ಹೊಸಗನ್ನಡ ಸಾಹಿತ್ಯ ಧರ್ಮದಿಂದ ಅತೀತವಾಗಿ ಬೆಳೆಯಿತು. ನವೋದಯದ ಆರಂಭದಲ್ಲಿ ಬಂದ ಹನ್ನೆರಡು ಜಾನಪದ ಮಹಾಕಾವ್ಯಗಳನ್ನು ಸಂಗ್ರಹಿಸುವ ದೊಡ್ಡ ಕಾರ್‍ಯವಾಯಿತು. ಬಹಿರಂಗ ಆಲೋಚನೆ ಕ್ರಮದಿಂದ ಮನುಷ್ಯನ ಅಂತರಂಗದ ಶೋಧವನ್ನು ನವೋದಯ ಸಾಹಿತ್ಯ ಸಾರಿತು ಎಂದರು. ಪ್ರಾದೇಶಿಕ ಭಾಷೆಯನ್ನು ಒಳಹೊಕ್ಕು ನೋಡುವ ಮೂರನೆಯ ಕಣ್ಣು ಬೇಕು. ಕೊಡವ, ತುಳು, ಬ್ಯಾರಿ ಭಾಷಾ ಸಾಹಿತಿಗಳು ಕನ್ನಡದಲ್ಲೂ ಹೆಚ್ಚು ಸಾಹಿತ್ಯ ರಚಿಸಿದಾಗ ಸಾಂಸ್ಕೃತಿಕ ಬೆಸುಗೆ, ಸೌಹಾರ್ದಯುತ ವಾತಾವರಣ ಸಾಧ್ಯ ಎಂದು ಹೇಳಿದರು.ಪ್ರಾಚೀನ ಕನ್ನಡ ಸಾಹಿತ್ಯ : ಪರಂಪರೆ ಪ್ರಕಾರಗಳು ಮತ್ತು ಮುಖಾಮುಖಿಯ ಬಗ್ಗೆ ಮಾತನಾಡಿದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಮಾತು, ಭಾಷೆ ಹುಟ್ಟಿದಂದಿನಿಂದಲೇ ಸಾಹಿತ್ಯ ಹುಟ್ಟಿತು. ಜಾನಪದ ಸಾ"ತ್ಯ ಗ್ರಂಥಸ್ಥವಾತು. ಈ ಮಧ್ಯೆ ಪಂಪನ ಸಾಹಿತ್ಯ ಕಾಲದ ನಂತರ ರಾಜಾಶ್ರಯ ತಿರಸ್ಕರಿಸಿದ ವಚನ ಸಾಹಿತ್ಯ, ರಗಳೆ, ಷಟ್ಪದಿಗಳು, ಬಳಿಕ ಕೀರ್ತನೆಗಳು ಹೀಗೆ ಸಾಹಿತ್ಯ ಬೆಳೆದು ಬಂತು. ವೈದಿಕ, ಜೈನ, ಇಸ್ಲಾಂ, ಕ್ರೈಸ್ತ ಹೀಗೆ ಮತಗಳ ಸಾಹಿತ್ಯವೂ ಕನ್ನಡದಲ್ಲಿ ಹರಿದು ಬಂತು ಎಂದು ಹೇಳಿದರು. ಧನಂಜಯ ಕುಂಬ್ಳೆ ಗ್ಟೋ ನಿರೂಪಿಸಿದರು.

No comments: