Monday, December 1, 2008

ಡಿಸೆಂಬರ್ ೨, ೩ ಹಾಗೂ ೪ರಂದು ಆರ್‌ಜಿಯುಹೆಚ್‌ಎಸ್ ಯುವಜನೋತ್ಸವ

ಡಿಸೆಂಬರ್ ೨, ೩ ಹಾಗೂ ೪ರಂದು ಆರ್‌ಜಿಯುಹೆಚ್‌ಎಸ್ ಯುವಜನೋತ್ಸವ

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಈ ವರ್ಷದ ವಿ.ವಿ. ಮಟ್ಟದ ಯುವಜನೋತ್ಸವ ಡಿಸೆಂಬರ್ ೨, ೩ ಹಾಗೂ ೪ನೇ ತಾರೀಖಿನಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಯಲಿದೆ. ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮೂರನೇ ಬಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಯೋಜನೆಯಲ್ಲಿ ನಡೆಸಲಾಗುತ್ತಿದೆ.
ಸುಮಾರು ೧೨೮ ಕಾಲೇಜುಗಳು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದು ೩,೨೦೦ ರಿಂದ ೪,೦೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ೯ ವೇದಿಕೆಗಳಲ್ಲಿ ನಡೆಯುವ ವಿವಿಧ ಸ್ಪರ್ಧೇಗಳು ಹಗಲು ಹಾಗೂ ರಾತ್ರಿಯೂ ನಡೆಯಲಿದೆ. ಸುಮಾರು ೨೨೫ ಉಪನ್ಯಾಸಕರು ಹಾಗೂ ೪೦೦ ಸ್ವಯಂಸೇವಕರ ಸಹಕಾರದೊಂದಿಗೆ ನಡೆಯಲಿರುವ ಸ್ಪರ್ಧೆಗಳಿಗೆ ರಾಜ್ಯದ ಹೆಸರಾಂತ ಕಲಾವಿದರು, ಸಾಹಿತಿಗಳು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ರಾಜೀವ್ ಗಾಂಧಿ ವಿ.ವಿ.ಯ ಉಪಕುಲಪತಿಗಳಾದ ಡಾ. ಎಸ್. ರಮಾನಂದ ಶೆಟ್ಟಿ ಉದ್ಘಾಟಿಸಲಿದ್ದು, ನಿವೃತ್ತ ಉಪಕುಲಪತಿಗಳಾದ ಶ್ರೀಮತಿ ಡಾ.ಎಸ್.ಕಾಂತ, ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ತಾಲ್ಲೂಕಿನ ಶಾಸಕರಾದ ಅಭಯ್ ಚಂದ್ರ ಜೈನ್, ಪ್ರತಿಷ್ಠಾನದ ಟ್ರಷ್ಠಿ ಅಮರನಾಥ್ ಶೆಟ್ಟಿ ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಗೀತ ಸ್ಪರ್ಧೆಗಳನ್ನೊಳಗೊಂಡ ನಾದಲಹರಿ, ನೃತ್ಯ ವೈವಿಧ್ಯಗಳಿರುವ ಹೆಜ್ಜೆ ಗೆಜ್ಜೆ, ಸಾಹಿತ್ಯ ಪೂರಕವಾದ ಸ್ಮೃತಿ-ಕೃತಿ, ರಂಗಭೂಮಿಗೆ ಸಂಬಂಧಿಸಿ ರಂಗಲೀಲೆ, ಚಿತ್ರಕ್ಕೆ ಸಮಬಂಧಪಟ್ಟಂತೆ ರೂಪ-ಸ್ವರೂಪ -ಇವು ಸ್ಪರ್ಧೆಗಳ ಹೆಸರುಗಳು. ನಾದ ಲಹರಿಯಲ್ಲಿ ೧೦, ಹೆಜ್ಜೆ-ಗೆಜ್ಜೆಯಲ್ಲಿ ೩, ಸ್ಮೃತಿ-ಕೃತಿಯಲ್ಲಿ ೪, ರಂಗಲೀಲೆಯಲ್ಲಿ ೪, ರೂಪ-ಸ್ವರೂಪದಲ್ಲಿ ೫ ನಮೂನೆಯ ಸ್ಪರ್ಧೆಗಳು ನಡೆಯಲಿದ್ದು ಮೂರು ದಿನಗಳ ಕಾಲ ಕಾರ್ಯಕ್ರಮ ನಿರಂತರವಾಗಿ ನಿರಂತರವಾಗಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.

No comments: